ಹಿಟ್ ಮ್ಯಾನ್ ರೋಹಿತ್ ಶರ್ಮಾ ತನ್ನ ಮಗಳಿಗೆ ಇಟ್ಟ ಹೆಸರೇನು ಗೊತ್ತಾ..?
ಟೀಮ್ ಇಂಡಿಯಾದ ಭರವಸೆಯ ಆಟಗಾರ ಹಿಟ್ ಮ್ಯಾನ್ ರೋಹಿತ್ ಶರ್ಮಾ ಸದ್ಯ ತಂದೆಯಾದ ಖುಷಿಯಲ್ಲಿದ್ದಾರೆ.. ಹೀಗಾಗೆ ಆಸ್ಟ್ರೇಲಿಯಾ ಸೀರಿಸ್ ನಿಂದ ವಾಪಸ್ ಆಗಿರುವ ರೋಹಿತ್ ತನ್ನ ಹೆಂಡತಿ ಹಾಗು ಮುದ್ದಾದ ಮಗಳೊಂದಿಗೆ ಸಮಯ ಕಳೆಯುತ್ತಿದ್ದಾರೆ…
ಇನ್ನು ರೋಹಿತ್ ಹಾಗು ರಿತಿಕಾ ದಂಪತಿಗಳು ತಮ್ಮ ಮಗಳಿಗೆ ‘ಸಮೈರಾ’ ಅಂತ ಹೆಸರಿಟ್ಟಿದ್ದಾರೆ.. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಗು ಮತ್ತು ಪತ್ನಿಯ ಜೊತೆಗೆ ಇರುವ ಫೋಟೊವನ್ನ ಅಪ್ ಲೋಡ್ ಮಾಡಿ ಈ ಸಂತಸದ ವಿಚಾರವನ್ನ ಹಂಚಿಕೊಂಡಿದ್ದಾರೆ.. ಅಂದಹಾಗೆ ಕಳೆದ ಡಿಸೆಂಬರ್ 31 ಕ್ಕೆ ಹೆಣ್ಣುಮಗು ಜನ್ಮ ನೀಡಿದ್ರು ರಿತಿಕಾ.. ಇನ್ನು ರೋಹಿತ್ ಶರ್ಮಾ ಆಸ್ಟ್ರೇಲಿಯಾಗೆ ಜನವರಿ 8ರಂದು ವಾಪಸ್ ತೆರಳಲ್ಲಿದ್ದು, ಜನವರಿ 12 ರಿಂದ ನಡೆಯಲಿರುವ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ..