ಜ.8 ಕ್ಕೆ ನನ್ನ ಹುಟ್ಟುಹಬ್ಬ ಆಚರಿಸಲ್ಲ ಎಂದ ರಾಕಿಂಗ್ ಸ್ಟಾರ್..!! ಕಾರಣವೇನು ಗೊತ್ತಾ..? ವಿಡಿಯೋ ನೋಡಿ..
ನಟ ರಾಕಿಂಗ್ ಸ್ಟಾರ್ ಯಶ್ ಇಂದು ತಮ್ಮ ಸಾಮಾಜಿಕ ಜಾಲತಾಣವಾದಲ್ಲಿ ವಿಡಿಯೋ ಒಂದನ್ನ ಅಪ್ ಲೋಡ್ ಮಾಡಿದ್ದಾರೆ.. ಇದರ ಮೂಲಕ ಹಲವು ವಿಚಾರಗಳ ಬಗ್ಗೆ ಅಭಿಮಾನಿಗಳ ಬಳಿ ತಮ್ಮ ಅನಿಸಿಕೆಯನ್ನ ಹಂಚಿಕೊಂಡ್ರು.. ಅದರಲ್ಲಿ ಒಂದು ಜ.8 ಕ್ಕೆ ನಡೆಯ ಬೇಕಿರುವ ಅವರ ಹುಟ್ಟು ಹಬ್ಬದ ವಿಚಾರವು ಸೇರಿದೆ.. ಈ ಬಾರಿ ತನ್ನ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳದಿರಲು ನಿರ್ಧಾರ ಮಾಡಿದ್ದಾನೆ..
ಕಾರಣ ನಮ್ಮ ಕುಟುಂಬದ ಹಿರಿಯರಾದ ರೆಬಲ್ ಸ್ಟಾರ್ ಅಂಬರೀಶ್ ಅವರನ್ನ ಕಳೆದುಕೊಂಡಿದ್ದು, ಹೀಗಾಗೆ ಈ ಬಾರಿ ಅಭಿಮಾನಿಗಳು ನನ್ನ ಹುಟ್ಟುಹಬ್ಬವನ್ನ ಆಚರಿಸೋದು ಬೇಡ ಅಂದಿದ್ದಾರೆ.. ಜೊತೆಗೆ ಕೆಜಿಎಫ್ ಸಿನಿಮಾವನ್ನ ಗೆಲ್ಲಿಸಿದ್ದೀರಿ.. ಈ ಸಕ್ಸಸ್ ಅನ್ನ ನಿಮ್ಮೊಂದಿಗೆ ಹಂಚಿಕೊಳ್ಳಲು ಯಶೋ ಯಾತ್ರೆಯ ಮೂಲಕ ನಿಮ್ಮ ಬಳಿ ನಾನೇ ಬರಲ್ಲಿದ್ದೇನೆ.. ದಯವಿಟ್ಟು ಯಾರು ಅನ್ಯತ ಭಾವಿಸಬೇಡಿ ಎಂದಿದ್ದಾರೆ..
ವಿಡಿಯೋ ನೋಡಿ..