ಈ ಬಾರಿ ದಾಸ ದರ್ಶನ್ ಹುಟ್ಟುಹಬ್ಬವು ಡೌಟ್..!!
ನಿನ್ನೆಯಷ್ಟೇ ಯಶ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡದೆ ಇರಲು ನಿರ್ಧಾರ ಮಾಡಿರೋದಾಗಿ ತಿಳಿಸಿದ್ರು.. ಇದಕ್ಕೆ ಕಾರಣ ಕೊಟ್ಟ ಯಶ್ ಕುಟುಂಬದ ಹಿರಿಯರಾದ ಅಂಬರೀಶ್ ಅವರು ಈಗ ನಮ್ಮೊಂದಿಗಿಲ್ಲ.. ಈ ಸಮಯದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮನಸ್ಸು ನನಗಿಲ್ಲ ಎನ್ನುವ ಮೂಲಕ ಅಭಿಮಾನಿಗಳಿಗೆ ವಿಚಾರವನ್ನ ಮುಟ್ಟಿಸಿದ್ದಾರೆ…
ಈ ನಡುವೆ ದರ್ಶನ್ ಅವರ ಹುಟ್ಟುಹಬ್ಬವು ನಡೆಯೋದು ಡೌಟ್ ಆಗಿದೆ.. ಯಾಕಂದ್ರೆ, ಅಂಬಿ ಅವರೇ ಹೇಳುತ್ತಿದ್ದ ಹಾಗೆ ದರ್ಶನ್ ಅಂಬಿ ಮನೆಯ ದೊಡ್ಡ ಮಗ.. ಈಗ ಆ ಮನೆಯ ಯಜಮಾನ ದರ್ಶನ್ ಪಾಲಿನ ತಂದೆ ಸ್ವರೂಪರಾದ ಅಂಬರೀಶ್ ಅವರು ಇಲ್ಲ.. ಹೀಗಾಗೆ ದರ್ಶನ್ ಅವರು ಸಹ ಈ ಬಾರಿಯ ಬರ್ತ್ ಡೇಯನ್ನ ಆಚರಿಸಿಕೊಳ್ಳುವುದು ಡೌಟ್ ಅಂತ ಹೇಳಲಾಗುತ್ತಿದೆ..
ಈ ನಡುವೆ ದರ್ಶನ್ ಅಭಿಮಾನಿಗಳು ಫೆಬ್ರವರಿ 16ಕ್ಕೆ ನಡೆಯ ಬೇಕಿರುವ ಬರ್ತ್ ಡೇಗೆ ಈಗಿನಿಂದಲೇ ಕೌಂಟ್ ಡೌನ್ ಶುರು ಮಾಡಿದ್ದು, ಡಿ ಬಾಸ್ ಬರ್ತ್ ಡೇ ಮಾಡೋಕೆ ಉತ್ಸುಕರಾಗಿದ್ದಾರೆ..