ನಾಳೆ ಬರೋದಿಲ್ವಾ ಸ್ಕೂಲ್ ವ್ಯಾನ್..? ಮೆಟ್ರೋ ಕೂಡ ಇರುತ್ತಾ ಇಲ್ವಾ..? ಡಿಟೇಲ್ಸ್ ಇಲ್ಲಿದೆ ನೋಡಿ..!!
ಮೋಟಾರು ವಾಹನ ಮಸೂದೆ, ಕೇಂದ್ರದ ಕಾರ್ಮಿಕ ನೀತಿ ವಿರೋಧಿಸಿ ದೇಶ ವ್ಯಾಪ್ತಿ ಮಂಗಳವಾರ ಹಾಗು ಬುಧವಾರ ಮುಷ್ಕರ ನಡೆಸಲು, ಹಲವು ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ಇನ್ನೆರಡು ದಿನ ರಾಜ್ಯ ಸೇರಿದಂತೆ ರಾಷ್ಟ್ರದ್ಯಂತ ಜನ ಜೀವನದಲ್ಲಿ ತೊಂದರೆ ಉಂಟಾಗಲಿದೆ…
ಸುಮಾರು 10 ಸಾವಿರಕ್ಕು ಹೆಚ್ಚು ಸ್ಕೂನ್ ವ್ಯಾನ್ ಚಾಲಕರು ಬಂದ್ ಹಿನ್ನೆಲೆಯಲ್ಲಿ ರಸ್ತೆಗೆ ಇಳಿಯದಿರಲು ತೀರ್ಮಾನಿಸಿದ್ದಾರೆ.. ಈ ವಿಚಾರವನ್ನ ಕರ್ನಾಟಕ ಶಾಲೆಗಳ ಒಕ್ಕೂಟ ಹಾಗು ಹಗುರ ಮೋಟಾರು ವಾಹನಗಳ ಚಾಲಕರ ಒಕ್ಕೂಟ ತಿಳಿಸಿದೆ.. ಇದರಲ್ಲಿ ಶಾಲೆಗೆ ಸೇರಿದ ವಾಹನಗಳು ಸೇರಿರುವುದಿಲ್ಲ.. ಬಾಡಿಗೆ ಸಂಚರಿಸುವ ವಾಹನಗಳ ಚಾಲಕರು ನಾಳೆ ಬಂದ್ ಗೆ ಬೆಂಬಲವನ್ನ ಸೂಚಿಸಿದ್ದಾರೆ..
ಇನ್ನುಳಿದಂತೆ ಎಂದಿನ ಹಾಗೆ ಬೆಂಗಳೂರು ನಗರದಲ್ಲಿ ಮೆಟ್ರೋ ಸಂಚಾರಕ್ಕೆ ಯಾವುದೇ ತೊಂದರೆ ಇರುವುದಿಲ್ಲ.. ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ ಎಂದು ಅಧಿಕಾರಿಗಳ ಸ್ಪಷ್ಟ ಪಡೆಸಿದ್ದಾರೆ..