ನಿರ್ಮಾಪಕ ಕೆ.ಮಂಜು ಅವರಿಗೆ ಹೃದಯಾಘಾತ.. ಈಗ ಹೇಗಿದ್ದಾರೆ..?
ಕನ್ನಡ ಸಿನಿಮಾ ರಂಗದ ಹೆಸರಾಂತ ನಿರ್ಮಾಪಕರಾದ ಕೆ.ಮಂಜು ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಹಾರ್ಟ್ ನಲ್ಲಿ ಬ್ಲಾಕೇಜ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಈಗಾಗ್ಲೇ ಚಿಕಿತ್ಸೆ ನಡೆಸಿರುವ ವೈದ್ಯರು ಬ್ಲಾಕೇಜ್ ಅನ್ನ ಕ್ಲಿಯರ್ ಕ್ಲಿಯರ್ ಮಾಡಿದ್ದು, ಯಾವುದು ಅಪಾಯವಿಲ್ಲ ಅಂತ ಸಷ್ಟಪಡೆಸಿದ್ದಾರೆ..
ವಿಚಾರ ತಿಳಿಯುತ್ತಿದ್ದ ಹಾಗೆ ಚಿತ್ರರಂಗದ ಗಣ್ಯರು ಸೇರಿದಂತೆ ಕೆ.ಮಂಜು ಅವರ ಹಿತೈಷಿಗಳು ಆಸ್ಪತ್ರೆಗೆ ತೆರಳಿ ಮಂಜು ಅವರ ಆರೋಗ್ಯ ವನ್ನ ವಿಚಾರಿಸುತ್ತಿದ್ದಾರೆ.. ಕ್ರೇಜಿಸ್ಟಾರ್ ರವಿಚಂದ್ರನ್ ಸಹ ಆಸ್ಪತ್ರೆಗೆ ತೆರಳಿ ಕುಟುಂಬದವರಿಗೆ ಧೈರ್ಯ ಹೇಳಿದ್ದಾರೆ.