ಮುಂದುವರೆದ ಐಟಿ ರೇಡ್.. ಯಶ್ ಆಡಿಟರ್ ಕಚೇರಿ ಮೇಲೆ ದಾಳಿ..!!
ಐಟಿ ಅಧಿಕಾರಿಗಳು ಸ್ಯಾಂಡಲ್ ವುಡ್ ನಟ ನಿರ್ಮಾಪಕರ ಮನೆ ಮೇಲೆ ದಾಳಿ ನಡೆಸಿದ್ದಾಗಿದೆ.. ಆ ನಂತರ ಶಿವರಾಜ್ ಕುಮಾರ್ ಸೇರಿದಂತೆ ಐಟಿ ಅಧಿಕಾರಿಗಳ ಕಚೇರಿಗೆ ತೆರಳಿ ವಿಚಾರಣೆಗೆ ಒಳಪಟ್ಟಿದ್ದಾರೆ.. ಅಷ್ಟಕ್ಕೆ ನಿಲ್ಲದ ಐಟಿ ಪರಿಶೀಲನೆ ಈಗ ಮತ್ತೆ ಮುಂದುವರೆದಿದ್ದು ನಟ ಯಶ್ ಅವರ ಆಡಿಟರ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ..
ಶೇಷಾದ್ರಿಪುರಂನಲ್ಲಿರುವ ಆಡಿಟರ್ ಕಚೇರಿಗೆ ಬಂದಿರುವ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ.. ಇನ್ನು ಆಡಿಟರ್ ಆದಂತಹ ಬಸವರಾಜ್ ಆಫೀಸ್ ನಲ್ಲಿದ್ದು, ಅಧಿಕಾರಿಗಳ ವಿಚಾರಣೆಗೆ ಒಳಗಾಗಿದ್ದಾರೆ.. ಇನ್ನು ಬಸವರಾಜ್ ಯಶ್ ಹಾಗು ಕೆಲ ನಿರ್ಮಾಪಕ, ನಟರ ಲೆಕ್ಕವನ್ನ ನೋಡಿಕೊಳ್ಳುತ್ತಿದ್ದಾರೆ..