ಪೈಲ್ವಾನ್ ಟೀಸರ್ ನೋಡಿ ಖುಷಿ ಪಟ್ಟ ಸಲ್ಮಾನ್ ಖಾನ್. ಕನ್ನಡದ ಗತ್ತು ಬಾಲಿವುಡ್ ವೂ ಮುಡ್ತು
ಸ್ಯಾಂಡಲ್ ವುಡ್ ನ ಬಾದ್ ಷಾ ಕಿಚ್ಚ ಸುದೀಪ್ ಕರ್ನಾಟಕವೇ ಹೆಮ್ಮೆಪಡುವ ಬಂಪರ್ ಗಿಫ್ಟ್ ನೀಡಿದ್ದಾರೆ. ಹೌದು, ಸಂಕ್ರಾಂತಿ ಹಬ್ಬದಂದು ಪೈಲ್ವಾನ್ ಟೀಸರ್ ರಿಲೀಸ್ ಮಾಡಿದ ಚಿತ್ರತಂಡ, ಎಲ್ಲರ ಮೆಚ್ಚಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಜಬರ್ ದಸ್ತ್ ಟೀಸರ್ ನೋಡಿ ಪ್ರೇಕ್ಷಕ ಮುಕವಿಸ್ಮಿತ ಆಗಿದ್ದಾರೆ. ಕಿಚ್ಚನ ಆ ಘರ್ಜನೆ, ಆ ಕಟ್ಟುಮಸ್ತಾದ ದೇಹ ಎಲ್ಲರು ಹುಬ್ಬೆರಿಸುವಂತೆ ಮಾಡಿದೆ.ಟೀಸರ್ ರಿಲೀಸ್ ಆಗಿ ಕೆಲ ಹೊತ್ತಿನ ಸಾಕಷ್ಟು ಪ್ರಶಂಸೆಯ ಸುರಿಮಳೆ ಹರಿದು ಬಂದಿದೆ. ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲೂ ಭರ್ಜರಿ ಸೌಂಡ್ ಮಾಡುತ್ತಿದೆ. ಇನ್ನು ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಕೂಡ ಪೈಲ್ವಾನ್ ಗೆ ಫಿದಾ ಆಗಿದ್ದಾರೆ. ನಾವು ಆರಂಭಿಸಿದ್ದನ್ನು ನೀವು ತುಂಬಾ ಎತ್ತರಕ್ಕೆ ಕೊಂಡೊಯ್ಯುತ್ತಿದ್ದೀರಿ.. ಆಲ್ ದ ಬೆಸ್ಟ್ ಎಂದು ಟ್ವೀಟ್ ಮಾಡಿದ್ದಾರೆ.