153 ರೂಗಳಿಗೆ 100 ಚಾನೆಲ್ ಗಳನ್ನ ಆಯ್ಕೆ ಮಾಡಿಕೊಳ್ಳಿ.. ತಲೆ ಕೆಡಿಸಿಕೊಳ್ಳಬೇಡಿ ಈ ನ್ಯೂಸ್ ನೋಡಿ
ಕಳೆದ ಕೆಲ ದಿನಗಳಿಂದ ಟ್ರಾಯ್ ತರಲು ಹೊರಟಿರುವ ಹೊಸ ನಿಯಮದ ಬಗ್ಗೆ ಕೇಬಲ್ ಆಪರೇಟರ್ ಗಳಿಂದ ಹಿಡಿದು, ಗ್ರಾಹಕರವರೆಗೂ ಗೊಂದಲ ತುಂಬಿದೆ.. ಹೀಗಾಗೆ ಈ ನಿಯಮವನ್ನ ಜಾರಿ ಮಾಡಲು ಇನ್ನು ಕಾಲಾವಕಾಶ ನೀಡಿ ಮುಂದಿನ ತಿಂಗಳ 1ರೊಳಗೆ ಜನರು ಹಾಗೆ ಕೇಬಲ್ ಟಿವಿ ಆಪರೇಟರ್ , ಡಿಟಿಎಚ್ ಗಳಿಗು ಅರಿವು ಮೂಡಿಸುವ ಕೆಲಸ ಮಾಡಿ, ಜೊತೆಗೆ ಕೆಲ ಬದಲಾವಣೆಗಳನ್ನ ಮಾಡಿದೆ ಟ್ರಾಯ್..
ಇದರ ಅನ್ವಯ 153 ರೂ ಗಳಿಗೆ 100 ಚಾನೆಲ್ ಗಳ ಆಯ್ಕೆಗೆ ಅವಕಾಶ ನೀಡಲಾಗಿದೆ.. . ತನ್ನ ಹೊಸ ಆದೇಶದಲ್ಲಿ ವೀಕ್ಷಕರಿಗೆ 153 ರೂ.ನಲ್ಲಿ 100 ಚಾನೆಲ್ಗಳನ್ನು ವೀಕ್ಷಿಸುವ ಆಯ್ಕೆ ನೀಡಲಾಗಿದೆ. ಅಂದರೆ ತಿಂಗಳಿಗೆ 153 ರೂ. ಪಾವತಿಸಿ 100 ಪೇಯ್ಡ್ ಅಥವಾ ಉಚಿತ ಚಾನೆಲ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಟ್ರಾಯ್ ತಿಳಿಸಿದೆ.
ಇದರ ಮೇಲು ನಿಮಗೆ ಬೇಕಾದ ಚಾನೆಲ್ ಗೆ ಆ ವಾಹಿನಿ ನಿಗದಿ ಪಡಿಸಿರುವ ಹಣವನ್ನ ಪಾವತಿಸಬೇಕಾಗುತ್ತೆ.. ಆದರೆ ಸದ್ಯ ಜಾರಿಗೆ ಬರಲಿರುವ ನಿಯಮ ಜನರ ಮೇಲೆ ಹೊರೆಯಾಗುತ್ತಿದ್ದ ತಿಂಗಳ ಟಿವಿ ಬಿಲ್ ಅನ್ನ ಕಡಿಮೆ ಮಾಡಿದೆ ಎಂದರೆ ತಪ್ಪಾಗಲ್ಲ..