ಮಿಂಚುಳ್ಳಿಯನ್ನ ಸೆರೆ ಹಿಡಿಯಲು ಗಂಟೆಗಟ್ಟಲೆ ಕಾದು ಕುಳಿತ ದರ್ಶನ್..!!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿ ಮೇಲೆ ಇರುವ ಒಲವು ಎಂತಹದ್ದು ಎಂದು ಎಲ್ಲರಿಗು ಗೊತ್ತಿದೆ.. ಕಾಡು ಪ್ರಾಣಿಗಳಿಂದ ಹಿಡಿದು ಪಕ್ಷಿಗಳನ್ನ ಸಾಕಿರುವ ಈ ಯಜಮಾನ, ಸದ್ಯ ವೈಲ್ಡ್ ಲೈಫ್ ಫೋಟೋಗ್ರಾಫರ್ ಕೂಡ ಆಗಿಬಿಟ್ಟಿದ್ದಾರೆ..
ಈ ಹಿಂದೆ ಮಲೆ ಮಹದೇಶ್ವರ ಬೆಟ್ಟ ಸೇರಿದಂತೆ ಹಲವು ಕಡೆ ತಮ್ಮದೇ ಕ್ಯಾಮರಾದಲ್ಲಿ ಕಾಡು ಪ್ರಾಣಿಗಳನ್ನ ಸೆರೆ ಹಿಡಿದಿದ್ದ ದರ್ಶನ್ ಅವರು, ಜ.15 ರಂದು ಮಿಂಚುಳ್ಳಿ ಪಕ್ಷಿಯನ್ನ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯಲು ಗಂಟೆಗಟ್ಟಲೆ ಕಾದ ಘಟನೆಯು ನಡೆದಿದೆ..
ಶ್ರೀರಂಗಪಟ್ಟಣದ ಬಳಿಯ ನಗುನಹಳ್ಳಿಯ ಕಾವೇರಿ ನದಿ ದಂಡೆಯಲ್ಲಿ ಈ ಮಿಂಚುಳ್ಳಿ ಪಕ್ಷಿಗಳ ಫೋಟೊ ತೆಗೆದಿದ್ದಾರೆ.. ಸದ್ಯ ದರ್ಶನ್ ಅವರ ಈ ಸಂದರ್ಭದ ಕೆಲ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇವರ ವನ್ಯಜೀವಿಗಳ ಮೇಲಿನ ಪ್ರೀತಿಗೆ ಎಲ್ಲರು ಭೇಷ್ ಎನ್ನುತ್ತಿದ್ದಾರೆ..