ರಣಜಿ ತಂಡಕ್ಕೆ ವಾಪಸ್ಸಾದ ಮಯಾಂಕ್… ಕರ್ನಾಟಕದ ತಂಡದ ಬಲಿಷ್ಠ ಪಡೆ ಇಲ್ಲಿದೆ ನೋಡಿ..

Date:

ರಣಜಿ ತಂಡಕ್ಕೆ ವಾಪಸ್ಸಾದ ಮಯಾಂಕ್… ಕರ್ನಾಟಕದ ತಂಡದ ಬಲಿಷ್ಠ ಪಡೆ ಇಲ್ಲಿದೆ ನೋಡಿ..

ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಸರಣಿಗೆ ಮಧ್ಯದಲ್ಲಿ ಆಯ್ಕೆಯಾದ ಆಟಗಾರ ಮಾಯಂಕ ಅಗರ್ವಾಲ್.. ತಂಡದಲ್ಲಿ ಸ್ಥಾನ ಮಾಡಿಕೊಟ್ಟ ಆಯ್ಕೆಗಾರರ ನಿರೀಕ್ಷೆಯನ್ನ ಸುಳ್ಳಾಗಿಸದೆ ತನ್ನ ಚೊಚ್ಚಲ ಮ್ಯಾಚ್ ನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿ ಸರಣಿಯಲ್ಲಿ ಎರಡು ಅರ್ಧ ಶತಕವನ್ನ ಬಾರಿಸುವ ಮೂಲಕ ಗಮನ ಸೆಳೆದಿದ್ರು ಮಯಾಂಕ್ ಅಗರ್ವಾಲ್..

ಸದ್ಯ ಭಾರತಕ್ಕೆ ವಾಪಸ್ಸಾಗಿರುವ ಈ ಯುವ ಆಟಗಾರ ಈಗ ಮತ್ತೆ ತಮ್ಮ ಕರ್ನಾಟಕ ರಣಜಿ ತಂಡವನ್ನ ಕೂಡಿಕೊಂಡಿದ್ದಾರೆ.. ಮನಿಷ್ ಪಾಂಡೆ ನೇತೃತ್ವದ ಕರ್ನಾಟಕ ರಣಜಿ ತಂಡಕ್ಕೆ‌ ಮಾಯಂಕ ಕಮ್ ಬ್ಯಾಕ್ ಮಾಡೀರೋದು ಆನೆ ಬಲ ಬಂದಂತ್ತಾಗಿದೆ.. 

ಇದೇ ಜನವರಿ 24 ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೌರಾಷ್ಟ್ರ ವಿರುದ್ದ ಕರ್ನಾಟಕ ತಂಡ ಸೆಮಿಫೈನಲ್ಸ್ ಆಡಲಿದೆ.. ಪವನ್ ದೇಶಪಾಂಡೆ ಬದಲಿಗೆ ಮಯಾಂಕ್ ಅವರಿಗೆ ಸ್ಥಾನ ನೀಡಲಾಗಿದೆ.. ಅಂದಹಾಗೆ ರಣಜಿ ಟೀಮ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಕರ್ನಾಟಕ ತಂಡ ಇಂತಿದೆ.. ಮನೀಶ್ ಪಾಂಡೆ (ನಾಯಕ), ಶ್ರೇಯಸ್ ಗೋಪಾಲ್ (ಉಪ-ನಾಯಕ), ಮಯಾಂಕ್ ಅಗರ್ವಾಲ್, ಆರ್. ಸಮರ್ಥ್​​, ಡಿ. ನಿಶ್ಚಲ್, ಕರುಣ್ ನಾಯರ್, ಕೆವಿ ಸಿದ್ಧಾರ್ಥ್​​​, ಶರತ್ ಶ್ರೀನಿವಾಸ್, ಶರತ್ ಬಿಆರ್, ಕೃಷ್ಣಪ್ಪ ಗೌತಮ್, ಜಿ ಸುಚಿತ್, ವಿನಯ್ ಕುಮರ್, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಪ್ರಸಿದ್ಧ್ ಕೃಷ್ಣ.

Share post:

Subscribe

spot_imgspot_img

Popular

More like this
Related

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ “ಸಾಲು ಮರದ ತಿಮ್ಮಕ್ಕ” ಇನ್ನಿಲ್ಲ..!

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ "ಸಾಲು ಮರದ ತಿಮ್ಮಕ್ಕ" ಇನ್ನಿಲ್ಲ..! ಬೆಂಗಳೂರು: ಪದ್ಮಶ್ರೀ ಪುರಸ್ಕೃತ...

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ!

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ! ನವದೆಹಲಿ:...

ರಾಜ್ಯ ಸರ್ಕಾರದಿಂದ 2025ನೇ ಸಾಲಿನ ‘ಸಾರ್ವತ್ರಿಕ ರಜಾ’ ದಿನಗಳ ಪಟ್ಟಿ ಬಿಡುಗಡೆ

ರಾಜ್ಯ ಸರ್ಕಾರದಿಂದ 2025ನೇ ಸಾಲಿನ 'ಸಾರ್ವತ್ರಿಕ ರಜಾ' ದಿನಗಳ ಪಟ್ಟಿ ಬಿಡುಗಡೆ ಕರ್ನಾಟಕ...

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ ಇಂದಿನ ವೇಗದ ಜೀವನದಲ್ಲಿ ಬಹುತೇಕ...