ಶಬರಿಮಲೆ‌ ಪ್ರವೇಶ ಮಾಡಿದ ಕನಕದುರ್ಗಗೆ ಇಲ್ಲ ತನ್ನ ಮನೆಗೆ ಪ್ರವೇಶ..!! ಈಗ ಎಲ್ಲಿದ್ದಾರೆ ಗೊತ್ತಾ ಈಕೆ..!!

Date:

ಶಬರಿಮಲೆ‌ ಪ್ರವೇಶ ಮಾಡಿದ ಕನಕದುರ್ಗಗೆ ಇಲ್ಲ ತನ್ನ ಮನೆಗೆ ಪ್ರವೇಶ..!! ಈಗ ಎಲ್ಲಿದ್ದಾರೆ ಗೊತ್ತಾ ಈಕೆ..!!

 ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಇಬ್ಬರು ಮಹಿಳೆಯರ ಪ್ರವೇಶ ರಾಷ್ಟ್ರೀಯ ಮಟ್ಟಿದಲ್ಲಿ ಸುದ್ದಿಯಾಗಿ ಪರ ವಿರೋಧ ಚರ್ಚೆಗೆ ಕಾರಣವಾಗಿತ್ತು.. ಇಬ್ಬರು ಮಹಿಳೆಯರಾದ ಕನಕದುರ್ಗಾ ಹಾಗು ಬಿಂದು ನಸುಕಿನಲ್ಲಿ ಅಯ್ಯಪ್ಪನ ದರ್ಶನ ಪಡೆದು ಬಂದಿದ್ರು.. ಆನಂತರ ಕನಕದುರ್ಗ ಮನೆಯವರು ಈಕೆಯನ್ನ ಮನೆಗೆ ಸೇರಿಸಲು ಒಪ್ಪಲಿಲ್ಲ..

ಮನೆಗೆ ಪ್ರವೇಶ ಮಾಡಲು ಯತ್ನಿಸಿದ ಕನಕದುರ್ಗ ಮೇಲೆ ಈಕೆಯ ಅತ್ತೆಯೇ ಹಲ್ಲೆ ಮಾಡಿದ್ರು.. ನಂತರ ಗಾಯಗೊಂಡ ಕನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ರು.. ಆಸ್ಪತ್ರೆಯಿಂದ ಚೇತರಿಸಿಕೊಂಡು ಮತ್ತೆ ತನ್ನ ಮನೆಗೆ ಪ್ರವೇಶ ಮಾಡಲು ಮುಂದಾಗಿದ್ದಾರೆ.. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಈಕೆಯ ಪತಿ, ಅಣ್ಣ ಹಾಗು ಅತ್ತೆ ಮನೆಗೆ ಬರದಂತೆ ಆಚೆ ಹಾಕಿದ್ದಾರೆ..

ಸದ್ಯ ಮನೆಯವರಿಂದ ಹೊರ ಹಾಕಿಸಿಕೊಂಡಿರುವ ಕನಕದುರ್ಗ ಬೇರೆ ದಾರಿಯಿಲ್ಲದೆ ಮತ್ತೆ ಪೊಲೀಸರ ಬಳಿ ರಕ್ಷಣೆ ಕೇಳಿದ್ದಾರೆ.. ಹೀಗಾಗೆ ಈಕೆಯನ್ನ ಸಂತ್ರಸ್ತರ ಕೇಂದ್ರ ಒನ್ ಸ್ಟಾಪ್ ಸೆಂಟರ್ನಲ್ಲಿ ಇರಿಸಲಾಗಿದೆ.. ಸುಪ್ರೀಂ ಕೋರ್ಟ್ ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶ ನೀಡುವಂತೆ ಆದೇಶಿಸಿದ ನಂತರ ಮೊದಲ ಬಾರಿಗೆ ಈ ಇಬ್ಬರು ಮಹಿಳೆಯರು ದೇವಸ್ಥಾನವನ್ನ ಪ್ರವೇಶ ಮಾಡಿದ್ರು..

 

 

Share post:

Subscribe

spot_imgspot_img

Popular

More like this
Related

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ ಅನೇಕರು...

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – IMD ಮುನ್ಸೂಚನೆ

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ...

ನೌಗಾಮ್ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ – 8 ಪೊಲೀಸರು ಸಾವು, 27ಕ್ಕೂ ಹೆಚ್ಚು ಮಂದಿ ಗಾಯ

ನೌಗಾಮ್ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ – 8 ಪೊಲೀಸರು ಸಾವು,...

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ “ಸಾಲು ಮರದ ತಿಮ್ಮಕ್ಕ” ಇನ್ನಿಲ್ಲ..!

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ "ಸಾಲು ಮರದ ತಿಮ್ಮಕ್ಕ" ಇನ್ನಿಲ್ಲ..! ಬೆಂಗಳೂರು: ಪದ್ಮಶ್ರೀ ಪುರಸ್ಕೃತ...