ಕುಂಭಮೇಳದಲ್ಲಿ ಲಕ್ಷಾಂತರ ಭಕ್ತರ ಹತ್ಯೆಗೆ ಸಂಚು ರೂಪಿಸಿದ್ದ ಉಗ್ರರ ಬಂಧನ.. ಇವರ ಪ್ಲಾನ್ ಕೇಳಿದ್ರೆ ಬೆಚ್ಚಿ ಬೀಳ್ತೀರಾ..!!!
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ವಿಶ್ವದ ದೊಡ್ಡ ಹಬ್ಬ ಕುಂಭಮೇಳ ಯಶಸ್ವಿಯಾಗಿ ಸಾಗುತ್ತಿದೆ.. ದೇಶ ಮಾತ್ರವಲ್ಲದೆ ವಿಶ್ವದ ಮೂಲೆ ಮೂಲೆಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ.. ದಿನ ಪ್ರತಿ ಲಕ್ಷಾಂತರ ಜನರ ಆಗಮನಕ್ಕೆ ಸಾಕ್ಷಿಯಾಗುತ್ತಿರುವ ಈ ಮಹಾ ಮೇಳದಲ್ಲಿನ ಭಕ್ತರ ಹತ್ಯೆಗೆ ಸಂಚು ರೂಪಿಸಿದ್ದ 9 ಜನ ಉಗ್ರರನ್ನ ಭಯೋತ್ಪಾದನಾ ನಿಗ್ರಹ ದಳ ಸೆರೆ ಹಿಡಿದೆ.. ಈ ಮೂಲಕ ಆಗಬಹುದಾಗಿದ್ದ ದೊಡ್ಡ ಅನಾಹುತವನ್ನ ತಡೆದಿದೆ..
ಭಕ್ತರು ಕುಡಿಯುವ ನೀರಿನಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಸೇರಿಸಿ ಅದರೊಂದಿಗೆ ಕೆಲವು ರಾಸಾಯನಿಕವನ್ನ ಮಿಕ್ಸ್ ಮಾಡಿ ಇಲ್ಲಿರುವ ಜನರನ್ನ ಕೊಲ್ಲಲು ಸ್ಕೆಚ್ ಹಾಕಿದ್ದರು ಎಂದು ತಿಳಿದು ಬಂದಿದೆ.. ಸೆರೆ ಸಿಕ್ಕವರಲ್ಲಿ ಒಬ್ಬಾತ ಕುಖ್ಯಾತ ಉಗ್ರ ರಷಿದ್ ಮಲ್ ಬಾರಿ ಪುತ್ರ ಹಾಗು ಮತ್ತೊಬ್ಬ ದಾವೂದ್ ಇಬ್ರಾಹಿಂ ತಂಡದಲ್ಲಿ ಸೇರಿರುವ ಮಝುರ್ ಮಲ್ ಬಾರಿ ಎಂದು ತಿಳಿದು ಬಂದಿದೆ..
ಕುಂಭಮೇಳದ ಮೇಲೆ ಉಗ್ರ ಕಣ್ಣು ಬಿದ್ದಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ತಿಳಿಸಿದ್ರಿಂದ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿತ್ತು.. ಜೊತೆಗೆ ಬಿಗಿ ಭದ್ರತೆಯನ್ನ ಸಹ ಮಾಡಲಾಗಿತ್ತು.. ಸದ್ಯ 9 ಜನ ಉಗ್ರರನ್ನ ಸೆರೆ ಹಿಡಿಯುವ ಮೂಲಕ ನಡೆಯ ಬಹುದಾಗಿದ್ದ ಮಹಾ ಪ್ರಮಾದವನ್ನ ತಡೆದಂತಾಗಿದೆ.. ಇಲ್ಲವಾಗಿದ್ರೆ ಕುಂಭಮೇಳ ಎಂಬ ದೊಡ್ಡ ಧಾರ್ಮಿಕ ಹಬ್ಬಕ್ಕೆ ಇದೊಂದು ಕಪ್ಪುಚುಕ್ಕೆಯಾಗಿ ಉಳಿದುಬಿಡುತ್ತಿತ್ತು..