ಪವರ್ ಸ್ಟಾರ್ ನ ಪವರ್ ಫುಲ್ ನಟಸಾರ್ವಭೌಮ ಟ್ರೇಲರ್ ರಿಲೀಸ್.. ಹೇಗಿದೆ ನೀವೆ ನೋಡಿ..!!

Date:

ಪವರ್ ಸ್ಟಾರ್ ನ ಪವರ್ ಫುಲ್ ನಟಸಾರ್ವಭೌಮ ಟ್ರೇಲರ್ ರಿಲೀಸ್.. ಹೇಗಿದೆ ನೀವೆ ನೋಡಿ..!!

ನಟಸಾರ್ವಭೌಮ.. ಸದ್ಯ ಇಡೀ ಪವರ್ ಸ್ಟಾರ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವನ್ನ ಬಡಿಸಲು ಸಿದ್ದವಾಗಿರುವ ಸಿನಿಮಾ.. ಇಂದು ಟ್ರೇಲರ್ ಬಿಡುಗಡೆಯನ್ನ ಹಬ್ಬದಂತೆ ಆಚರಿಸಿ ಸಂಭ್ರಮಿಸಿದ್ದಾರೆ ಅಭಿಮಾನಿಗಳು.. ಲಹರಿ ಆಡಿಯೋ ಸಂಸ್ಥೆ ಹೊರತಂದಿರುವ ಟ್ರೇಲರ್ ಬಿಡುಗಡೆಗೊಂಡ ಕೆಲವೇ ನಿಮಿಷಗಳಲ್ಲಿ ಸಖತ್ತಾಗೆ ಸೌಂಡ್ ಮಾಡೋಕೆ ಶುರು ಮಾಡಿದೆ..

ಪವನ್ ಒಡೆಯರ್ ರಣವಿಕ್ರಮ ಸಿನಿಮಾದ ಬಳಿಕ ಎರಡನೇ ಬಾರಿ ಪವರ್ ಸ್ಟಾರ್ ಆಕ್ಷನ್ ಕಟ್ ಹೇಳಿದ್ದು, ಜರ್ನಲಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡುವ ಅಪ್ಪು ಮೈಮೇಲೆ ದವ್ವವನ್ನ ಬರಿಸಿಕೊಂಡು ಎಲ್ಲರಲ್ಲು ನಿರೀಕ್ಷೆಯನ್ನ ಹುಟ್ಟು ಹಾಕುತ್ತಿದ್ದಾರೆ.. ಅದರಲ್ಲು ಟೀಸರ್ ಹಾಗೆ ಹಾಡಿನ ಮೂಲಕ ಬೇಜಾನ್ ಸೌಂಡ್ ಮಾಡ್ತಿದ್ದ ನಟಸಾರ್ವಭೌಮ ಟ್ರೇಲರ್ ಆದಷ್ಟು ಬೇಗ ಸಿನಿಮಾ ನೋಡುವ ಕ್ರೇಜ್ ಅನ್ನ ಹುಟ್ಟುಹಾಕ್ತಿದೆ..

ಟ್ರೇಲರ್ ನಲ್ಲಿ ಲವ್ ಆಕ್ಷನ್ ಸೆಂಟಿಮೆಂಟ್ ಕಾಮಿಡಿ ಹಾರರ್ ಸೇರಿದಂತೆ ಮನರಂಜನೆಯ ಎಲ್ಲ ಅಂಶಗಳು ಸೇರಿರೋದು ಎದ್ದು ಕಾಣ್ತಿದೆ.. ಫೆಬ್ರವರಿ 7ಕ್ಕೆ ಚಿತ್ರ ಬಿಡುಗಡೆಯಾಗಲ್ಲಿದ್ದು, ಅಭಿಮಾನಿಗಳು ಟ್ರೇಲರ್ ನೋಡಿದ ಬಳಿಕವಂತು ಸಿನಿಮಾ‌ ಕಣ್ತುಂಬಿಕೊಳ್ಳಲು ಕಾದು ಕುಳಿದ್ದಾರೆ.. ಇನ್ನು ಕೆಲವೇ ದಿನ ಬಾಕ್ಸ್ ಆಫೀಸ್ ನಲ್ಲಿ ಪವರ್ ನ ಜಾದು ಶುರುವಾಗಲಿದೆ.. ಅಲ್ಲಿವರೆಗು ಟ್ರೇಲರ್ ಹಾಗು ಹಾಡುಗಳ ಜಾದು ನಡೆಯುತ್ತಿರಲಿ.. ನೀವೆ ಒಮ್ಮೆ ಬಿಡುಗಡೆಗೊಂಡಿರುವ ಟ್ರೇಲರ್ ಅನ್ನ ನೋಡಿ ಬಿಡಿ..

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...