ದೇವರಾಜ್ ಪುತ್ರ ಪ್ರಣಮ್ ಗೆ ಎದುರಾಯ್ತು ಸಂಕಷ್ಟ..!! ರಕ್ತ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ..!!?
ಕಳೆದ ವರ್ಷ ಜಯನಗರದಲ್ಲಿ ತಡೆ ರಾತ್ರಿ ನಡೆದ ಕಾರು ಅಪಘಾತದ ಬಗ್ಗೆ ಸದ್ಯ ಸತ್ಯಾಂಶಗಳನ್ನ ಪೊಲೀಸರು ಒಂದೊಂದಾಗಿಯೇ ಹೊರ ತೆಗೆಯುತ್ತಿದ್ದಾರೆ.. ಈ ವಿಚಾರವಾಗಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು ಇದರಲ್ಲಿ ದೇವರಾಜ್ ಅವರ ಪುತ್ರ ಪ್ರಣಮ್ ಗಾಂಜಾ ಸೇವಿಸಿರುವುದು ರಕ್ತ ಪರೀಕ್ಷೆಯಲ್ಲಿ ಕನ್ಫರ್ಮ್ ಆಗಿದ್ದು, ಈ ವಿಚಾರವನ್ನ ಸಹ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂಬು ಮಾಹಿತಿ ಲಭ್ಯವಾಗಿದೆ..
ಉದ್ಯಮಿ ಆದಿಕೇಶವುಲು ಮೊಮ್ಮಗ ಗೀತವಿಷ್ಣು ಡ್ರೈವ್ ಮಾಡುವ ಸಂದರ್ಭದಲ್ಲಿ ಕಾರು ಅಪಘಾತಕ್ಕೆ ಈಡಾಗಿತ್ತು.. ಈ ಸಂಧರ್ಭದಲ್ಲಿ ಕಾರ್ ನಲ್ಲಿ ಗಾಂಜಾ ಪತ್ತೆಯಾದ ಬಗ್ಗೆ ವರದಿಯಾಗಿತ್ತು.. ಇನ್ನು ಇದೇ ಕಾರ್ ನಲ್ಲಿದ್ದು ಪ್ರಣಮ್ ತಾವು ಗಾಂಜಾ ಸೇವಿಸಿರಲಿಲ್ಲ ಅಂತ ಹೇಳಿಕೆ ನೀಡಿದ್ರು.. ಆದರೀಗ ರಕ್ತ ಪರೀಕ್ಷೆಯಲ್ಲಿ ಗಾಂಜಾ ಸೇವೆ ಬಗ್ಗೆ ಪುರಾವೆ ಸಹಿತವಾಗಿ ಸಿಕ್ಕಿದ್ದು, ಈ ಎಲ್ಲರಿಗು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ…