ಬಿಗ್ ಬಾಸ್ ವಿನ್ನರ್ ಶಶಿ, 100 ದಿನಗಳ ಪಯಣ ಮುಗಿಸಿ ತಮ್ಮ ಮನೆಗೆ ಮರಳಿದ್ದಾರೆ. ಬಿಡುವಿಲ್ಲದ ಸಮಯದಲ್ಲೂ ಬಿಡುವು ಮಾಡಿಕೊಂಡು ಬಿಗ್ ಬಾಸ್ ಮನೆಯ ಅನುಭವಗಳನ್ನು ಹಂಚಿಕೊಂಡರು. ಅದರಲ್ಲೂ ಮುಖ್ಯವಾಗಿ ಶಶಿ ಹಾಗೂ ಕವಿತಾ ನಡುವಿನ ಫ್ರೆಂಡ್ ಶಿಫ್ ಬಗ್ಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು. ಈ ಬಾರಿ ಬಿಗ್ ಬಾಸ್ ಮನೆಯ ಕೇಂದ್ರ ಬಿಂದು ಅಂದ್ರೆ ಕವಿತಾ ಹಾಗೂ ಶಶಿ. ಅಲ್ಲದೆ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಅನ್ನೋ ಗಾಸಿಪ್ ದೊಡ್ಡದಾಗಿ ಹರಡಿತ್ತು. ಆದರೆ ಈ ಗಾಸಿಪ್ ಬಗ್ಗೆ ಶಶಿ ಹೇಳಿದ್ದು ಹೀಗೆ.. ನನ್ನ ಹಾಗೂ ಕವಿತಾ ನಡುವೆ ಸ್ನೇಹ ಬಿಟ್ಟರೇ ಬೇರೇನೂ ಇಲ್ಲ. ನಮ್ಮಿಬ್ಬರ ನಡುವೆ ಇದದ್ದು ಕೇವಲ ಫ್ರೆಂಡ್ ಶೀಪ್ ಅಷ್ಟೇ. ಜೊತೆಯಲ್ಲಿಯೇ ಹೆಚ್ಚು ಇರುತ್ತಿದ್ದರಿಂದ ಹೊರಗಡೆ ಈ ಭಾವನೆ ಮೂಡಿರಬಹುದು. ಆದರೆ ಕವಿತಾ ನನಗೆ ಉತ್ತಮ ಸ್ನೇಹಿತೆ ಎಂದು ಸ್ಪಷ್ಟಪಡಿಸಿದರು ಮಾಡ್ರನ್ ರೈತ ಶಶಿ.
ಬಿಗ್ ಬಾಸ್ ವಿಜೇತ ಶಶಿ, ಕವಿತಾ ಜೊತೆಗಿನ ಸಂಬಂಧದ ಬಗ್ಗೆ ಹೇಳಿದ್ದೇನು ಗೊತ್ತೆ.?
Date: