ನಟಸಾರ್ವಭೌಮ ಚಿತ್ರದ ನಾಯಕಿ ಅನುಪಮಾ ಗೆ ಬೇಸರವಾಗಿದ್ಯಂತೆ..!! ಯಾಕಂದರೆ..?

Must read

ನಟಸಾರ್ವಭೌಮ ಚಿತ್ರದ ನಾಯಕಿ ಅನುಪಮಾ ಗೆ ಬೇಸರವಾಗಿದ್ಯಂತೆ..!! ಯಾಕಂದರೆ..?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ನಟಸರ್ವಾಭೌಮ ರಿಲೀಸ್ ಗೆ ರೆಡಿಯಾಗಿದೆ. ಇತ್ತೀಚಿಗೆ ಈ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಭಾರಿ ಸಂಚಲನ ಮೂಡಿಸಿತು. ಸಾಕಷ್ಟು ಹವಾ ಸೃಷ್ಟಿಸಿದ ನಟಸರ್ವಾಭೌಮ ಚಿತ್ರದ ನಾಯಕಿಗೆ ಯಾಕೋ ಕೊಂಚ ಬೇಸರವಿದೆ ಅಂತೆ.. 

ಮೂಲತಃ ಮಲೆಯಾಳಿ ಹುಡುಗಿಯಾದ ಅನುಪಮಾ ಪರಮೇಶ್ವರನ್ ಗೆ ಡಬ್ ಮಾಡಲು ಸಾಧ್ಯವಾಗಲಿಲ್ವಂತೆ.. ಹೌದು, ಇದುವರೆಗೆ ನಾನು ನಟಿಸಿದ ಎಲ್ಲ ಭಾಷೆಯ ಚಿತ್ರಗಳಿಗೂ ನಾನೇ ಡಬ್ ಮಾಡಿದ್ದೇನೆ. ಆ ಭಾಷೆಯನ್ನು ಕಲಿತು ನಾನೇ ಸ್ವತಃ ಧ್ವನಿ ನೀಡಿದ್ದೇನೆ. ಆದರೆ, ಬೇರೆ ಚಿತ್ರಗಳಲ್ಲಿ ಬ್ಯುಸಿಯಾದ ಕಾರಣ, ನಟಸಾರ್ವಭೌಮ ಚಿತ್ರಕ್ಕೆ ಡಬ್ ಮಾಡಲು ಸಾಧ್ಯವಾಗಲಿಲ್ಲ ಎಂದು ಬೇಸರಗೊಂಡರು. 

ರಚಿತಾ ರಾಮ್ ಸೇರಿದಂತೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಇದ್ದು, ಅನುಪಮಾ ಪರಮೇಶ್ವರನ್ ಲಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಕ್ ಲೈನ್ ನಿರ್ಮಾಣದ ನಟಸರ್ವಾಭೌಮ ಚಿತ್ರ ಇದೇ ಫೆಬ್ರವರಿ 7ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

- Advertisement -spot_img

More articles

- Advertisement -spot_img

Latest article