ಯಶ್ ಕೆಜಿಎಫ್ ಸಿನಿಮಾ ಟಿವಿಯಲ್ಲಿ ಟೆಲಿಕಾಸ್ಟ್..!! ನೋಡಲು ಮರೆಯದಿರಿ..!!
ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಭಾರಿ ಸುದ್ದಿ ಮಾಡಿದ ಕೆಜಿಎಫ್ ಸಿನಿಮಾ ಈಗ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಕೆಜಿಎಫ್ ಚಿತ್ರ ಇನ್ನು 100 ದಿನ ಪೂರೈಸಿಲ್ಲ, ಅದರೂ ಸಹ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಹೌದು, ಕೆಜಿಎಫ್ ಹಿಂದಿಯ ಅವತರಣಿಕೆ ಸೋನಿ ಮ್ಯಾಕ್ಸ್ ಚಾನಲ್ ನಲ್ಲಿ ಟೆಲಿಕಾಸ್ಟ್ ಆಗಲಿದ್ದು, ಪ್ರೋಮೋಗಳು ಪ್ರಸಾರವಾಗ್ತಿದೆ.
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆಗಳನ್ನ ಸೃಷ್ಟಿಸಿದ ಕೆಜಿಎಫ್ ಸಿನಿಮಾ ನೂರು ಕೋಟಿ ಗಳಿಸಿತ್ತು. ಬಾಲಿವುಡ್ ನಲ್ಲಿ 2018ರಲ್ಲಿ ತೆರೆಕಂಡು ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಕೆಜಿಎಫ್. ಅಲ್ಲದೆ ಬಾಲಿವುಡ್ ನಲ್ಲಿ ಸುಮಾರು 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.
ಕೆಜಿಎಫ್ ಹಿಂದಿ ಸಿನಿಮಾದ ಪ್ರಸಾರ ಹಕ್ಕು ಪಡೆದಿರೋ ಸೋನಿ ಟೆಲಿವಿಷನ್ ಸಂಸ್ಥೆ, ಫೆಬ್ರವರಿಯಲ್ಲಿ ಈ ಚಿತ್ರದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮಾಡ್ತಾ ಇದೆ. ಈಗಾಗ್ಲೆ ಇದರ ಪ್ರಮೋಷನ್ ಕೂಡ ಆರಂಭಿಸಿದೆ. ಇತ್ತ ಯಶ್ ಅಭಿಮಾನಿಗಳು ಕೆಜಿಎಫ್ ಸಿನಿಮಾ ಇಷ್ಟು ಬೇಗಾ ಟಿವಿಯಲ್ಲಿ ಬರ್ತಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಯಾರ್ಯಾರು ಥಿಯೇಟರ್ ಸಿನಿಮಾ ನೋಡಿಲ್ಲ ಟಿವಿಯಲ್ಲಿ ನೋಡಲು ಕಾಯುತ್ತಿದ್ದಾರೆ.