ಗುರುವಾರ ನಡೆಯಲಿರುವ ಶ್ರೀಗಳ ಪುಣ್ಯ ಸ್ಮರಣೆಗೆ ಸಕಲ ತಯಾರಿ..
ನಡೆದಾಡುವ ದೇವರು ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿಗಳ 11ನೇ ದಿನದ ಪುಣ್ಯ ಸ್ಮರಣೆಗೆ ಇಡೀ ಸಿದ್ದಗಂಗಾ ಮಠವನ್ನ ಸಿದ್ದ ಮಾಡಲಾಗ್ತಿದೆ.. ಶ್ರೀಗಳ ಸ್ಮರಣಾ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಹೀಗಾಗೆ ಗುರುವಾರ ನಡೆಯಲಿರುವ ಪುಣ್ಯಸ್ಮರಣೆಗೆ ಬರುವವರಿಗೆ ಪ್ರಸಾದದ ವ್ಯವಸ್ಥೆಯನ್ನ ಸಹ ಮಾಡಲಾಗಿದೆ..
ಇನ್ನು ಭಕ್ತರು ರಾಜ್ಯದ ಮೂಲೆ ಮೂಲೆಗಳಿಂದ ಬಂದು ಮಠಕ್ಕೆ ಬೇಕಾದ ದಿನಸಿಗಳನ್ನ ನೀಡುತ್ತಿದ್ದಾರೆ.. ಮಠದ ನಾಲ್ಕು ಅಡುಗೆ ಕೊಪ್ಪಲಿನಲ್ಲಿ 100 ಕ್ಕೂ ಹೆಚ್ಚು ಅಡುಗೆ ಭಟ್ಟರು ವಿವಿಧ ಸಿಹಿ ತಿನಿಸುಗಳ ತಯಾರಿಯನ್ನ ಮಾಡುತ್ತಿದ್ದಾರೆ.. ಭಕ್ತಾಧಿಗಳ ಸಂಖ್ಯೆ 5 ಲಕ್ಷ ಮೀರುವ ಸಾಧ್ಯತೆಯಿದ್ದು ಮಠದ ಹತ್ತು ಕಡೆಗಳಲ್ಲಿ ಅನ್ನ ದಾಸೋದಕ್ಕೆ ಸಿದ್ದತೆ ಮಾಡಲಾಗಿದೆ..