ಮಹಾತ್ಮಗಾಂಧಿ ಭಾವಚಿತ್ರಕ್ಕೆ ಗುಂಡು ಹಾರಿಸಿದ 13 ಮಂದಿ ವಿರುದ್ದ ಕೇಸ್ ದಾಖಲು..!!
ನಿನ್ನೆ ದೇಶದೆಲ್ಲೆಡೆ ಮಹಾತ್ಮಗಾಂಧಿ ಜೀ ಸಾವನ್ನಪ್ಪಿದ ದಿನವನವನ್ನ ಅವರ ತ್ಯಾಗ, ಸಾಧನೆಗಳನ್ನ ನೆನೆದು ಆಚರಿಸಲಾಯಿತು.. ಆದರೆ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡು ಹಿಂದೂ ಮಹಾಸಭಾ, ಗಾಂದಿ ಹುತಾತ್ಮರಾದ ದಿನವನ್ನ ಶೌರ್ಯ ದಿನವೆಂದು ಆಚರಿಸಿದೆ.. ಜೊತೆಗೆ ಗಾಂದಿ ಅವರನ್ನ ಹತ್ಯೆ ಮಾಡಿದ ನಾಥುರಾಮ್ ಗೋಡ್ಸ್ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿದೆ..
ಇಷ್ಟಕ್ಕೆ ನಿಲ್ಲದ ಇವರ ಆಚರಣೆ ಗಾಂದಿ ಅವರ ಭಾವಚಿತ್ರಕ್ಕೆ ನಕಲಿ ಗನ್ ಅನ್ನ ಬಳಸಿ ಶೂಟ್ ಮಾಡಲಾಗಿದೆ.. 1948ರ ಜ.30 ರಂದು ನಡೆದ ಘಟನೆಯನ್ನ ಮರುಕಳಿಸುವಂತೆ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಮಹಾತ್ಮ ಗಾಂಧಿ ಜೀ ಅವರ ಚಿತ್ರಕ್ಕೆ ಗನ್ ನಿಂದ ಶೂಟ್ ಮಾಡುವ ಮೂಲಕ ಅವಮಾನ ಮಾಡಿದ್ರು..
ರಾಷ್ಟ್ರಪಿತನಿಗೆ ಅವಮಾನ ಮಾಡಿದ ಹಿಂದೂ ಮಹಾಸಭಾದ ಮಹಿಳಾ ನಾಯಕಿ ಸೇರಿದಂತೆ 13 ಮಂದಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ..