ಮೇಕ್ ಇನ್ ಇಂಡಿಯಾ: 4,999 ರೂ ಗೆ 32 ಇಂಚಿನ ಸ್ಮಾರ್ಟ್ ಟಿವಿ ಬಿಡುಗಡೆ..!!

Date:

ಮೇಕ್ ಇನ್ ಇಂಡಿಯಾ: 4,999 ರೂ ಗೆ 32 ಇಂಚಿನ ಸ್ಮಾರ್ಟ್ ಟಿವಿ ಬಿಡುಗಡೆ..!!

ಮೋದಿ ಅವರ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಸಾಮಿ ಇನ್ಫೋಟೆಕ್ಸ್ ಸಂಸ್ಥೆಯು 32 ಇಂಚಿನ ಸ್ಮಾರ್ಟ್ ಆ್ಯಂಡ್ರಾಯಿಡ್ ಟಿವಿಯನ್ನ ಬಿಡುಗಡೆ ಮಾಡಿದೆ.. ಈ ಟಿವಿಯ ತಯಾರಿ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಡೆದಿದ್ದು, ಭಾರತೀಯ ಟಿವಿ ಇತಿಹಾಸದಲ್ಲಿ ಹೊಸ ಸಾಧನೆ ಮಾಡಿದೆ.. ಯಾಕೆಂದರೆ ಈ ಸ್ಮಾರ್ಟ್ ಟಿವಿ 32 ಇಂಚನ್ನ ಹೊಂದಿದ್ದು, ಕೇವಲ 4999 ರೂಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ..

ಮಧ್ಯಮ ಕುಟುಂಬಗಳನ್ನ ಗಮನದಲ್ಲಿ ಇಟ್ಟುಕೊಂಡು ಆ ಕುಟುಂಬ ಆರ್ಥಿಕಕತೆಯನ್ನ ಗಣನೆಗೆ ತೆಗೆದುಕೊಂಡು ಈ ಟಿವಿಯನ್ನ ಸಿದ್ದ ಮಾಡಿರೋದಾಗಿ ಸಂಸ್ಥೆ ಹೇಳಿಕೊಂಡಿದೆ.. ಹೆಚ್ ಡಿ ಕ್ವಾಲಿಟಿಯಲ್ಲಿ ವಿಡಿಯೋ ಕ್ವಾಲಿಟಿ ಇರಲಿದ್ರೆ, 512 ಎಂಬಿ ರ್ಯಾಮ್ ಹಾಗು 4 ಜಿಬಿ ಸ್ಟೋರೇಜ್ ಕ್ಯಾಪಸಿಟಿಯನ್ನ ಒಳಗೊಂಡಿದೆ..  ಆ್ಯಂಡ್ರೋಯಿಡ್ 4.4 ಜೊತೆಗೆ  ಯೂಟ್ಯೂಬ್ ಹಾಗು ಫೇಸ್ ಬುಕ್ ನ ಸಹ ಇದರಲ್ಲಿ ಅಳವಡಿಸಲಾಗಿದೆ..ಇನ್ನು ಹೆಚ್ ಡಿಎಂಐ ಹಾಗು 2 ಯುಎಸ್ ಬಿ ಪೋರ್ಟ್, ಆಡಿಯೋ ವಿಡಿಯೋ ಇನ್ ಪುಟ್ ನೀಡಲಾಗಿದ್ದು 10W ಸ್ಪೀಕರ್ ನ ಹೊಂದಿದೆ..

SRS Dolby ಡಿಜಿಟಲ್ 5 ಕ್ವಾಲಿಟಿ ಬ್ರ್ಯಾಂಡ್ ಈಕ್ವಲೈಸರ್ ನ ಸೌಂಡ್ ಕ್ವಾಲಿಟಿ ಇದರಲ್ಲಿದೆ.. ಸದ್ಯ ಟಿವಿ ಕ್ಷೇತ್ರದಲ್ಲಿ ಹೊಸ ಅಲೆಯನ್ನ ಸೃಷ್ಟಿ ಮಾಡಲು ಹೊರಟ್ಟಿದ್ದು, ಸದ್ಯದಲ್ಲೇ ಮಾರುಕಟ್ಟೆಯಲ್ಲಿ ಈ ಟಿವಿ ಲಭ್ಯವಾಗಲಿದೆ..

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್.!‌

‌ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್.!‌ ಬೆಂಗಳೂರು: ಸಿಲಿಕಾನ್‌...

ನೂತನ ಐಟಿ ನಗರಕ್ಕೆ ನಿರಂತರ ಹೂಡಿಕೆ, 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ: ಡಿ.ಕೆ. ಶಿವಕುಮಾರ್

ನೂತನ ಐಟಿ ನಗರಕ್ಕೆ ನಿರಂತರ ಹೂಡಿಕೆ, 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ:...

ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್

ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್ ಬೆಂಗಳೂರು: ನಗರದ...

ಮೊಳಕೆ ಕಾಳು ತಿನ್ನುವುದರಿಂದ ಆರೋಗ್ಯಕ್ಕೆ ಏನೇನು ಲಾಭ ತಿಳಿಯಿರಿ

ಮೊಳಕೆ ಕಾಳು ತಿನ್ನುವುದರಿಂದ ಆರೋಗ್ಯಕ್ಕೆ ಏನೇನು ಲಾಭ ತಿಳಿಯಿರಿ ಇತ್ತೀಚಿನ ದಿನಗಳಲ್ಲಿ ಆರೋಗ್ಯ...