ಬಿಗ್ ಬ್ರೇಕಿಂಗ್: ಭೂಗತ ರವಿ ಪಾತಕಿ ಪೂಜಾರಿ ಅರೆಸ್ಟ್..!!
ಭೂಗತ ಪಾತಕಿ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕಾದ
ಸೆನೆಗಲ್ ನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಸುಮಾರು 60 ಕೇಸ್ ಗಳು ಈತನ ಮೇಲಿದ್ದು, ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಟೆಂಡ್ ಕ್ರಿಮಿನಲ್ ಆಗಿದ್ದಾರೆ.. ರವಿ ಪೂಜಾರಿಯನ್ನು ಅರೆಸ್ಟ್ ಮಾಡಲು ಭಾರತದ ತನಿಖಾ ಸಂಸ್ಥೆಗಳು ಸೆನೆಗಲ್ ದೇಶದೊಂದಿಗೆ ಸಂಪರ್ಕದಲ್ಲಿದ್ದವು ಎಂದು ತಿಳಿದುಬಂದಿದ್ದು, ಹೀಗಾಗೆ ಬಂಧನದ ಬಗ್ಗೆ ಮಾಹಿತಿ ಕಲೆ ಹಾಕಿದೆ..
ಕಳೆದ 15 ವರ್ಷದಿಂದ ದುಬೈ, ಆಸ್ಟ್ರೇಲಿಯಾದಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಇಂದು ಸೆನೆಗಲ್ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ..