ಸುಳ್ಳಾದ ನಿರೀಕ್ಷೆ..!! ಹೆಚ್ಚಿದ ಕೇಬಲ್ ಬಿಲ್..!
ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತಂದಿರುವ ಹೊಸ ನಿಯಮದಿಂದ ಬಹುತೇಕ ಕೇಬಲ್ ಹಾಗು ಡಿಟಿಎಚ್ ಚೆಂದಾದರರು ಸುಮಾರು 25% ನಷ್ಟು ಅಧಿಕ ಹಣವನ್ನ ಬಿಲ್ ಆಗಿ ಪಾವತಿಸಿ ಟಿವಿ ನೋಡಬೇಕಾದ ಅನಿವಾರ್ಯ ನಿರ್ಮಾಣವಾಗಿದೆ ಎಂದು, ರೇಟಿಂಗ್ ಎಜೆನ್ಸಿ ವರದಿ ಮಾಡಿದೆ..
ನಿಮಗೆ ಇಷ್ಟವಾದ ಚಾನೆಲ್ ಗಳನ್ನ ಆಯ್ಕೆ ಮಾಡಿಕೊಂಡು ಅದಕ್ಕೆ ಮಾತ್ರ ಹಣ ಪಾವತಿಸುವಂತೆ ಹೊಸ ನಿಯಮ ಜಾರಿಯಾಗಿರುವ ಬೆನ್ನಲ್ಲೆ, ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗವಾಗುತ್ತಿದೆ.. ಇದರ ಲಾಭ ಕೇವಲ ಜನಪ್ರಿಯ ಚಾನೆಲ್ ಗಳಿಗೆ ಮಾತ್ರ ಎನ್ನಲಾಗ್ತಿದೆ.. ತಿಂಗಳಿಗೆ ಇಂತಿಷ್ಟು ದರವನ್ನ ನಿಗದಿ ಮಾಡಿರೋದು, ಚಾನೆಲ್ ಗಳ ಆಯ್ಕೆಗೆ ಗ್ರಾಹಕರನ್ನ ಬಿಟ್ಟಿರುವುದು, ಬಿಲ್ ನ ಏರಿಕೆಗೆ ಕಾರಣವಾಗಿದೆ.
ಈ ಬಗ್ಗೆ ವಿಶ್ಲೇಷಣೆ ನಡೆಸಿರುವ ಕ್ರಿಸಿಲ್ ಮಾಸಿಕ ಬಿಲ್ ನ ಮೇಲೆ ಈ ಹೊಸ ನೀತಿ ವಿಭಿನ್ನ ಪರಿಣಾಮವನ್ನ ಬೀರುತ್ತಿರುವುದಾಗಿ ಕಂಡುಕೊಂಡಿದೆ.. ಈಗೀನ ಬಿಲ್ ನ ಆಧರಿಸಿ ವಿಶ್ಲೇಷಣೆ ಮಾಡಿದಾಗ ಗ್ರಾಹಕರು 25% ನಷ್ಟು ಅಧಿಕ ಬಿಲ್ ಕಟ್ಟಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.. ಅಂದರೆ ತಿಂಗಳಿಗೆ 240-250 ಬಿಲ್ ಕಟ್ಟುತ್ತಿದ್ದವರು ಇನ್ನು ಮುಂದೆ ಏಕಾಏಕಿ 300 ರೂಗಳಿಗು ಅಧಿಕ ಹಣವನ್ನ ಪಾವತಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ..