38 ವರ್ಷಗಳ ಬಳಿಕ ತೆರೆ ಮೇಲೆ ಮತ್ತೆ ಬರ್ತಿದೆ ರೆಬಲ್ ಸ್ಟಾರ್ ಅಭಿನಯದ ಈ ಚಿತ್ರ..!!
ಈಗಾಗ್ಲೇ ಡಾ.ರಾಜ್ ಕುಮಾರ್ ಸೇರಿದಂತೆ ವಿಷ್ಣುವರ್ಧನ್ ಅವರ ಹಳೆ ಸಿನಿಮಾಗಳು ಮತ್ತೆ ಬೆಳ್ಳಿ ತೆರೆಮೇಲೆ ರಾರಾಜಿಸಿವೆ.. ಈಗ ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಅವರ ಎವರ್ ಗ್ರೀನ್ ಸಿನಿಮಾ ‘ಅಂತ‘ ರೀ ರಿಲೀಸ್ ಆಗ್ತಿದೆ..
ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದ ಈ ಚಿತ್ರಕ್ಕೆ ಎಚ್.ಎನ್.ಮಾರುತಿ ಹಾಗು ವೇಣುಗೋಪಾಲ್ ನಿರ್ಮಾಣ ಮಾಡಿದ್ರು.. ಸದ್ಯ ಚಿತ್ರದ ಹಕ್ಕು ಲಹರಿ ಸಂಸ್ಥೆಯ ಬಳಿ ಇದ್ದು, ದೀಪಕ್ ಪಿಕ್ಚರ್ಸ್ ಹಾಗು ಶ್ರೀನಿವಾಸ ಪಿಕ್ಚರ್ಸ್ ಈ ಸಿನಿಮಾದ ವಿತರಣೆ ಮಾಡುತ್ತಿದೆ..ಚಿತ್ರವನ್ನ ಡಿಜಿಟಲ್ ಫಾರ್ಮಾಟ್ ನಲ್ಲಿ ರಿಲೀಸ್ ಮಾಡಲಿದೆ..
80 ರ ದಶಕದಲ್ಲಿ ರೆಬಲ್ ಸ್ಟಾರ್ ನ ರೆಬಲ್ ಕ್ಯಾರೆಕ್ಟರ್ಗೆ ಸಾಕ್ಷಿಯಾದ ಸಿನಿಮಾವಿದು.. ಕುತ್ತೆ ಕನ್ವರ್ ನಹೀ ಕನ್ವರ್ ಲಾಲ್ ಬೊಲೊ ಎಂಬ ಡೈಲಾಗ್ ಕನ್ನಡ ಚಿತ್ರರಂಗವಿರುವ ವರೆಗು ಜೀವಂತ..