ವಾಹನ–ಮನೆ ಸಾಲದ ಬಡ್ಡಿ ಇಳಿಕೆ..! RBI ನಿಂದ ದಿಟ್ಟ ನಿರ್ಧಾರ…..
ಭಾರತೀಯ ರಿಸರ್ವ್ ಬ್ಯಾಂಕ್ ಊರ್ಜಿತ್ ಪಟೇಲ್ ನಿರ್ಗಮನದ ನಂತರ ಇದೇ ಮೊದಲ ಬಾರಿಗೆ ದ್ವೆ ಮಾಸಿಕ ನೀತಿ ಪರಾಮರ್ಶೆಯ ವರದಿಯನ್ನ ಪ್ರಕಟಗೊಳಿಸಿದ್ದು, ಆರ್ ಬಿಐ ಗವರ್ನರ್ ಶಕ್ತಿದಾಸ್ ‘ ಬಡ್ಡಿ ದರ ಇಳಿಸುವ ಮಹತ್ವದ ನಿರ್ಧಾರವನ್ನ 6 ಸದಸ್ಯರನ್ನ ಒಳಗೊಂಡ ಹಣಕಾಸು ನೀತಿ ಸಮಿತಿಯ ಸರ್ವಾನುಮತದ ನಿರ್ಧಾರದಿಂದ ಪ್ರಕಟಿಸಲಾಗಿದೆ..
ಇದರ ಅನುಸಾರ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಮುಖ ಬಡ್ಡಿ ದರವನ್ನ ಶೇ.೦.25 ರಷ್ಟು ಕಡಿತಗೊಳಿಸಿದ್ದು, ಶೇ.6.25 ಕ್ಕೆ ನಿಗದಿಗೊಳಿಸಿದೆ.. ಇದರ ಪರಿಣಾಮವಾಗಿ ಗೃಹ ಹಾಗು ಮೋಟಾರು ವಾಹನಗಳ ಸಾಲಗಳು ಅಗ್ಗವಾಗಲಿದೆ..
ಇದರಿಂದ ಗೃಹ ಹಾಗು ಮೋಟಾರು ಸಾಲ ಪಡೆಯುವವರಿಗೆ ಇಎಂಐ ನ ಹೊರೆಯಲ್ಲಿ ಸ್ವಲ್ಪ ಪ್ರಮಾಣದ ಹೊರೆ ಕಡಿಮೆಯಾಗಲಿದೆ.. ಆರ್ ಬಿಐನ ಈ ಹೊಸ ನೀತಿಯಿಂದ ಬ್ಯಾಂಕ್ ಗಳಲ್ಲಿ ಸಹ ಬಡ್ಡಿ ದರ ಕಡಿಮೆಯಾಗಲ್ಲಿದೆ ಎಂದು ಶಕ್ತಿದಾಸ್ ಹೇಳಿದ್ದಾರೆ..