ಜಮ್ಮು–ಕಾಶ್ಮೀರಾ ಯುವಕರನ್ನ ಉಗ್ರ ಚಟುವಟಿಕೆಗೆ ಬಳಸಲು ಸೋಶಿಯಲ್ ಮೀಡಿಯಾ ಮೊರೆದ ಹೋದ ಪಾಕ್.!!
ಪಾಕಿಸ್ಥಾನ ತನ್ನ ಉಗ್ರ ಚಟುವಟಿಕೆಗಳನ್ನ ಮತ್ತಷ್ಟು ಹೆಚ್ಚಿಸಲು ಸಜ್ಜಾದಂತೆ ಕಾಣುತ್ತಿದೆ.. ಯುವಕರನ್ನ ಈ ಉಗ್ರಗಾಮಿ ಬಣ ಸೇರಿಸಿಕೊಳ್ಳಲು, ಅವರನ್ನ ಭಾರತದ ವಿರುದ್ದ ಎತ್ತಿಕಟ್ಟಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ.. ಹೀಗಾಗೆ ತನ್ನ ಉಗ್ರತ್ವಕ್ಕೆ ಜಮ್ಮು–ಕಾಶ್ಮೀರದ ಯುವಕರನ್ನ ಸೆಳೆಯಲು ಪ್ಲಾನ್ ರೂಪಿಸಿ ಕಾರ್ಯಚರಣೆಗೆ ಇಳಿದಿದೆ ಎಂಬ ಮಾಹಿತಿ ಹೊರ ಬಿದ್ದಿದೆ…
ನಾರ್ಥನ್ ಕಮಾಂಡ್ ಜನರಲ್ ಆಫೀಸರ್ ಕಮಾಂಡಿಂಗ್ ಚೀಫ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಮತ್ತಷ್ಟು ಉಗ್ರಗಾಮಿ ಚಟುವಟಿಕೆಗಳು ಮುಂದುವರೆಸಲು, ಸಾಮಾಜಿಕ ತಾಲತಾಣದ ಮೊರೆ ಹೋಗಿದ್ದು, ಅಲ್ಲಿನ ಯುವಕರನ್ನ ಹುಡುಕಿ ಅವರನ್ನ ತಮ್ಮತ್ತ ಸೆಳೆದು ಆಮಿಷ ಒಡ್ಡಿ ಉಗ್ರ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಪ್ಲಾನ್ ಹಾಕಿದೆ..
ಜೊತೆಗೆ ಇದೇ ಸಾಮಾಜಿಕ ಜಾಲತಾಣವನ್ನ ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡು, ಆ ಮೂಲಕ ಕಣಿವೆ ರಾಜ್ಯದಲ್ಲಿ ತಮ್ಮ ಪರ ಅಭಿಪ್ರಾಯ ಮೂಡಿಸುವ ಕಾರ್ಯಕ್ಕೂ ಮುಂದಾಗಿದ್ದು, ಜೊತೆಗೆ ಉಗ್ರವಾದದ ಬಗ್ಗೆಯು ಸಕರಾತ್ಮಕ ಮನೋಭಾವವನ್ನ ಮೂಡಿಸುವ ಪ್ರಯತ್ನ ಅವರ ಸೇನೆ ಮಾಡುತ್ತಿದೆ ಎಂದು ಹೇಳಲಾಗಿದೆ.. ಇನ್ನು ಈ ಬಗ್ಗೆ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಮಾತನಾಡಿದ್ದು, ಅತಿರೇಕದ ವರ್ತನೆ ತೋರಿದ್ದೆ ಆದರೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಸಾಧ್ಯತೆ ಇದೆ ಎಂದಿದ್ದಾರೆ..