ನಟಸಾರ್ವಭೌಮ ನೋಡಿ ಇಂಡಿಯ್ ಕ್ರಿಕೆಟ್ ಟೀಮ್ ನ ಈ ಪ್ಲೇಯರ್ ಹೇಳಿದ್ದೇನು…?
ಬುಧವಾರ ರಾತ್ರಿ ಕರುನಾಡಿನಲ್ಲಿ ನಟಸಾರ್ವಭೌಮ ಫೀವರ್ ಶುರುವಾಗಿದೆ.. ಅದು ಯಾವ ಹಂತವನ್ನ ತಲುಪಿದೆ ಅಂದ್ರೆ, ಬಿಡುಗಡೆಗೊಂಡ ಎಲ್ಲ ಥಿಯೇಟರ್ ಗಳಲ್ಲು ಹೌಸ್ ಫುಲ್, ಚಿತ್ರವನ್ನ ನೋಡಿ ಬಂದವರೆಲ್ಲ ಉಘೇ ನಟಸಾರ್ವಭೌಮ ಅಂತಿದ್ದಾರೆ.. ಇನ್ನು ಎಷ್ಟೋ ಅಭಿಮಾನಿಗಳು ಟಿಕೆಟ್ ನ ಕಾಯ್ದಿರಿಸಿ ಇಂದು ಹಾಗೆ ವೀಕ್ ಎಂಡ್ ಗೆ ಪ್ಲಾನ್ ಮಾಡಿದ್ದಾರೆ..
ಇನ್ನು ಭಾರತೀಯ ಮಹಿಳಾ ತಂಡದ ಕ್ರಿಕೆಟರ್ ವೇದಕೃಷ್ಣಮೂರ್ತಿ ನಟಸಾರ್ವಭೌಮ ಚಿತ್ರವನ್ನ ನೋಡಿ ಸಖತ್ ಖುಷಿಯಾಗಿದ್ದಾರೆ.. ಚಿತ್ರದ ಕ್ಲೈಮೆಕ್ಸ್ ಅನ್ನ ಮೆಚ್ಚಿಕೊಂಡಿದ್ದಾರೆ.. ಅಪ್ಪು ಸಾರ್ ನಟನೆಗೆ ಬೋಲ್ಡ್ ಆಗಿದ್ದಾರೆ.. ಹೀಗಾಗೆ ಇಡೀ ಸಿನಿಮಾ ಟೀಮ್ ಗೆ ಶುಭಾಯಶ ತಿಳಿಸಿದ್ದು, ಎಲ್ಲ ದಾಖಲೆಗಳನ್ನು ಮುರಿಯುವಂತಾಗಿ ಎಂದು ಹಾರೈಸಿದ್ದಾರೆ..