‘ಕೆ.ಜಿ.ಎಫ್ ಚಾಪ್ಟರ್ 2’ ಶೂಟಿಂಗ್ ಯಾವಾಗ ಶುರು? ರಿಲೀಸ್ ಯಾವಾಗ.? ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ

0
396

ಕೆ.ಜಿ.ಎಫ್  ಸಿನಿಮಾ ಈಗಲೂ ರಾಜ್ಯ ಮಾತ್ರವಲ್ಲ, ದೇಶ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ. ಹೀಗಾಗಿಯೇ ಕೆ.ಜಿ.ಎಫ್ ಚಾಪ್ಟರ್ 2 ಚಿತ್ರದ್ಮೇಲೂ ಭಾರಿ ಕುತೂಹಲ ಮೂಡಿಸಿದೆ. ಹಾಗಾದರೆ ಚಾಪ್ಟರ್​ 2 ಶೂಟಿಂಗ್ ಯಾವಾಗ ಶುರು? ರಿಲೀಸ್ ಯಾವಾಗ? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆದ ಕೆ.ಜಿ.ಎಫ್ ಇಂದಿಗೆ 50 ದಿನಗಳನ್ನು ಪೂರೈಸಿ ಸಕ್ಸಸ್‍ ಫುಲ್ ಆಗಿ ಮುನ್ನುಗ್ಗುತ್ತಿದೆ. ಇದ್ರ ನಡುವೆಯೇ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್ 2 ಕುರಿತು ತಲೆ ಕೆಡಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿದ್ದು, ಏಪ್ರಿಲ್ ಮಧ್ಯದಲ್ಲಿ ಶೂಟಿಂಗ್ ಶುರುವಾಗಲಿದೆಯಂತೆ.

ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್​ಗೆ ಕೆ.ಜಿ.ಎಫ್ 2 ಚಿತ್ರೀಕರಣ ಮುಗಿಯಲಿದೆ. 2020 ರ ಏಪ್ರಿಲ್‍ ನ ಹೊತ್ತಿಗೆ ಕೆ.ಜಿ.ಎಫ್ ಸೀಕ್ವಲ್ ರಿಲೀಸ್‍ ಗೆ ಐಡಿಯಾ ಮಾಡಿದ್ದಾರೆ. ಒಟ್ಟಾರೆ ಕೆಜಿಎಫ್ ನೋಡೋಕೆ ಇನ್ನೂ ಒಂದೂವರೆ ವರ್ಷ ಕಾಯಲೇಬೇಕು.