ಟೀ ಇಂಡಿಯಾದ ಮಾಜಿ ಆಟಗಾರನ ಮೇಲೆ ಮಾರಣಾಂತಿಕ ಹಲ್ಲೆ..!!
ಹೌದು, ಇಂಡಿಯಾ ಟೀಮ್ ಜರ್ಸಿ ತೊಟ್ಟು ತಂಡದ ಪರವಾಗಿ ಮೈದಾನಕ್ಕಿಳಿದಿದ್ದ ಬೌಲರ್ ಆದ ಅಮಿತ್ ಭಂಡಾರಿಗೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.. ಸೆಂಟ್ ಸ್ಟೀಫನ್ ಮೈದಾನದಲ್ಲಿ ಅಂಡರ್ 23 ಕ್ರಿಕೆಟ್ ಟೀಂ ಟ್ರಯಲ್ ಮ್ಯಾಚ್ ನಡೆಯುತ್ತಿತ್ತು.. ಇದೇ ಸಂದರ್ಭದಲ್ಲಿ ಮೈದಾನಕ್ಕೆ ಬಂದ ಪುಂಡರ ಗುಂಪು ಏಕಾಏಕಿ ಅಮಿತ್ ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ..
ದೆಹಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ ಸೀನಿಯರ್ ಸೆಲೆಕ್ಷನ್ ಕಮಿಟಿ ಚೇರ್ ಆಗಿರುವ ಅಮಿತ್ ಭಂಡಾರಿ ಮೇಲೆ ಹಲ್ಲೆಗೆ ತಂಡ ಆಯ್ಕೆ ಕಾರಣ ಎನ್ನಲಾಗ್ತಿದೆ.. ಅಂಡರ್ 23 ತಂಡವನ್ನ ಆಯ್ಕೆ ಮಾಡಲಾಗಿತ್ತು, ಇದರಲ್ಲಿ ಮೂವರು ಪ್ಲೇಯರ್ ಗಳು ಆಯ್ಕೆಯಾಗಿರಲಿಲ್ಲ.. ಹಲ್ಲೆ ಮಾಡಿದ ಗುಂಪಿನಲ್ಲಿ ಈ ಮೂವರು ಇದ್ದರು ಎನ್ನಲಾಗಿದೆ..
ಭಾರತದ ಪರವಾಗಿ 2 ಏಕದಿನ ಪಂದ್ಯಗವನ್ನಾಡಿರುವ ಅಮಿತ್ ಭಂಡಾರಿ ಐದು ವಿಕೆಟ್ ಗಳನ್ನ ಕಬಳಿಸಿದ್ರು.. 2000 ರಲ್ಲಿ ಪಾಕಿಸ್ತಾನ ವಿರುದ್ದ 2 ವಿಕೆಟ್ ಪಡೆದ್ರೆ 2004 ರಲ್ಲಿ ಜಿಂಬಾಬ್ವೆ ವಿರುದ್ದ 3 ವಿಕೆಟ್ ಕಬಳಿಸಿದ್ರು.. ಆನಂತರ ಗಾಯದ ಸಮಸ್ಯೆಯಿಂದ ಟೀಮ್ ನಿಂದ ಹೊರಗೆ ಉಳಿಯಬೇಕಾಯಿತು..