ಅಂದು ಪಬ್ಲಿಕ್ ಟಿವಿ..!! ಇಂದು ಕನ್ನಡ ಫಿಲ್ಮ್ ಚೇಂಬರ್ ನಿಂದ ಸಿದ್ದಗಂಗಾ ಮಠಕ್ಕೆ ದೇಣಿಗೆ..
ಕಳೆದ ಕೆಲ ದಿನಗಳ ಹಿಂದೆ ಪಬ್ಲಿಕ್ ಟಿವಿ ವತಿಯಿಂದ ಸಿದ್ದಗಂಗಾ ಮಠಕ್ಕೆ 5 ಲಕ್ಷ ದೇಣಿಗೆಯನ್ನ ನೀಡಲಾಗಿತ್ತು.. ಜೊತೆಗೆ ಎಚ್.ಆರ್.ರಂಗನಾಥ್ ಅವರು ಸಿದ್ದಗಂಗಾ ಮಠದ ಕಿರಿಯ ಶ್ರೀಗಳನ್ನ ಸಂದರ್ಶನ ಮಾಡಿ, ಆನಂತರ ತಮ್ಮ ಚಾನೆಲ್ ನ ಪರವಾಗಿ 5 ಲಕ್ಷದ ಚೆಕ್ ಅನ್ನ ನೀಡಿ ಕಿರಿಯ ಶ್ರೀಗಳ ಆಶೀರ್ವಾದ ಪಡೆದು ಬಂದಿದ್ರು..
ಸದ್ಯ ಇದೇ ಹಾದಿಯಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯು ಹೆಜ್ಜೆ ಹಾಕಿದೆ.. ಈಗಾಗ್ಲೇ ಹಲವು ಸ್ಟಾರ್ ನಟರು ಮಠಕ್ಕೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ, ಮಾಡುತ್ತಿದ್ದಾರೆ.. ಇದರ ಬೆನ್ನಲ್ಲೇ ಫಿಲ್ಮ್ ಚೇಂಬರ್ ಸಹ 5 ಲಕ್ಷ ರೂಗಳ ಚೆಕ್ ಅನ್ನ ನೀಡುವ ಮೂಲಕ ಚಿತ್ರರಂಗವು ಮಠದ ಜೊತೆಗೆ ಇರುವ ಸಂದೇಶವನ್ನ ರವಾನೆ ಮಾಡಿದೆ..
ಫಿಲ್ಮ್ ಚೇಂಬರ್ ನ ಅಧ್ಯಕ್ಷರಾದ ಚಿನ್ನೇಗೌಡ, ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದ್ ಸೇರಿದಂತೆ ಹಲವರು ಶ್ರೀ ಮಠಕ್ಕೆ ಭೇಟಿ ನೀಡಿ, ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಮಠದ ಅನ್ನ ದಾಸೋಸಕ್ಕೆ ದೇಣಿಗೆ ನೀಡಿದ್ದಾರೆ..