No menu items!
12.4 C
Munich
Wednesday, April 29, 2026

ಇದೇ ಶನಿವಾರದಿಂದ ‘ಯಜಮಾನ’ ಟಿಕೆಟ್ ಬುಕಿಂಗ್ ಶುರು…!!

Must read

ಚಾಲೆಂಜಿಂಗ್ ಸ್ಟಾರ್ ದರ್ಶನ್, ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಜೋಡಿಯ ‘ಯಜಮಾನ’ ಚಿತ್ರ ಭಾರೀ ಹೈಪ್ ಕ್ರಿಯೇಟ್ ಆಗಿದೆ. ಇದೇ ಮಾರ್ಚ್ 1ರಂದು ಯಜಮಾನ ರಾಜ್ಯಾದ್ಯಂತ ಅಬ್ಬರಿಸಲು ರೆಡಿಯಾಗಿದೆ. ಕಳೆದ ವರ್ಷ ದರ್ಶನ್ ಚಿತ್ರ ಬಿಡುಗಡೆಯಾಗದ ಕಾರಣ ಈ ಬಾರಿ ದಾಸನ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈ ಸಂದರ್ಭದಲ್ಲಿ ಇದೇ ಫೆಬ್ರವರಿ 23 ರಿಂದ ಆನ್‌ಲೈನ್‌ನಲ್ಲಿ ಯಜಮಾನ ಚಿತ್ರದ ಟಿಕೆಟ್​ಗಳು ಮಾರಾಟವಾಗಲಿವೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೌದು, ಅಭಿಮಾನಿಗಳು ಇದೇ ಶನಿವಾರದಿಂದ ಟಿಕೆಟ್ ಬುಕ್ ಮಾಡಬಹುದು. ಹಾಗಿದ್ರೆ ಮಾರ್ಚ್‌ 1ರಂದು ಅಭಿಮಾನಿಗಳು ಹಬ್ಬ ಮಾಡೋದಂತೂ ಪಕ್ಕಾ.

ದರ್ಶನ್-ರಶ್ಮಿಕಾ ಜೊತೆ ‘ಡಾಲಿ’ ಖ್ಯಾತಿಯ ಧನಂಜಯ್, ಠಾಕೂರ್ ಅನೂಪ್ ಸಿಂಗ್ ಕೂಡ ಪಾತ್ರ ಮಾಡಿರುವುದು ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಎನ್ನಲಾಗಿದೆ. ವಿ ಹರಿಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿರುವ ‘ಯಜಮಾನ’ ಚಿತ್ರಕ್ಕೆ ಶೈಲಜಾ ನಾಗ್ ಮತ್ತು ಬಿ ಸುರೇಶ್ ಬಂಡವಾಳ ಹೂಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article