ಯಶ್ ಅಭಿನಯದ ಕೆಜಿಎಫ್ ಚಿತ್ರ ಒಂದು ಮಾಸ್ ಸಿನಿಮಾ ಆಗಿದ್ದರು ತಾಯಿಯ ಸೆಂಟಿಮೆಂಟ್ ಹೆಚ್ಚಿದೆ. ಈ ಸಿನಿಮಾದ ಮೇಜರ್ ಹೈಲೈಟ್‍ಗಳಲ್ಲಿ ತಾಯಿ ಪಾತ್ರ ಕೂಡ ಒಂದು. ಇನ್ನು ರಾಕಿಭಾಯ್ ತಾಯಿ ಪಾತ್ರ ಮಾಡಿದ್ದು, ಅರ್ಚನಾ ಜೋಯಿಸ್. ಒಂದು ಸಣ್ಣಪಾತ್ರ ಹೊಸ ಜೀವನಕ್ಕೆ ನಾಂದಿಯಾಗುತ್ತೆ ಎಂಬುದಕ್ಕೆ ಅರ್ಚನಾ ಅವರೇ ತಾಜಾ ಉದಾಹರಣೆಯಾಗಿದ್ದಾರೆ.
ಕೆಜಿಎಫ್ ಚಾಪ್ಟರ್ 1 ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ತಾಯಿಯ ಪಾತ್ರ ಮೂಲಕ ಜನಪ್ರಿಯತೆ ಗಳಿಸಿದ ಆರ್ಚನಾ ಜೋಯಿಸ್ ಈಗ ನಾಯಕ ನಟಿ. ಹೌದು, ವಿಜಯರಥ ಎಂಬ ಸಿನಿಮಾದ ಮೂಲಕ ಅರ್ಚನಾ ಅವರು ನಾಯಕಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿರುವ ವಿಜಯರಥದಲ್ಲಿ ಆರ್ಚನಾ ಜತೆ ಇನ್ನೊಬ್ಬರು ನಾಯಕಿಯೂ ಇದ್ದಾರಂತೆ.ಕೆಜಿಎಫ್ ಸಿನಿಮಾ ನನ್ನ ಸಿನಿಮಾ ಬದುಕಿನಲ್ಲಿ ಒಂದು ಮಹತ್ತರ ತಿರುವು. ದೊಡ್ಡ ಸಕ್ಸಸ್‌ನ್ನು ಕೆಜಿಎಫ್ ನೀಡಿದೆ. ಆರ್ಚನಾ ಅವರು ಈ ಹಿಂದೆ ಸೀರಿಯಲ್‌ಗಳಲ್ಲಿ ನಟಿಸಿದ್ದರೂ, ಜನ ರಾಖಿ ಬಾಯ್ ಮದರ್ ಎಂದೇ ಗುರುತಿಸುತ್ತಾರಂತೆ. ಸದ್ಯಕ್ಕೆ ಡಾನ್ಸ್ ರಿಯಾಲಿಟಿ ಶೋ ನಲ್ಲಿ ಬ್ಯೂಸಿಯಾಗಿದ್ದಾರೆ.