ಕನ್ನಡಕ್ಕೊಬ್ಬರೆ ಯಜಮಾನ ಅದು ಡಾ.ವಿಷ್ಣುವರ್ಧನ್ ಎಂದ ದರ್ಶನ್.. ವಿಡಿಯೋ ನೋಡಿ..
ಮಾರ್ಚ್ ಒಂದರಂದು ಬಿಡುಗಡೆಗೆ ಸಿದ್ದವಿರುವ ಸಿನಿಮಾ ಡಿ ಬಾಸ್ ಅಭಿನಯದ ಚಿತ್ರ ‘ಯಜಮಾನ‘.. ವರ್ಷ ಕಳೆದ್ರು ದರ್ಶನ್ ಅವರನ್ನ ಬಿಗ್ ಸ್ಕ್ರೀನ್ ಮೇಲೆ ಮಿಸ್ ಮಾಡಿಕೊಳ್ತಿರೋ ದಚ್ಚು ಅಭಿಮಾನಿಗಳಿಗೆ ದೊಡ್ಡ ಟ್ರೀಟ್ ಸಿಗ್ತಿರೋದು ಇದೇ ಯಜಮಾನ ಸಿನಿಮಾ ಕಡೆಯಿಂದ… ಹೀಗಾಗೆ ಈ ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಮೂಡಿ, ಹಾಡು ಹಾಗೆ ಟ್ರೇಲರ್ ಯಜಮಾನನ ಆಗಮನಕ್ಕೆ ಕಾದು ಕುಳಿತುಕೊಳ್ಳುವಂತೆ ಮಾಡಿದೆ…
ಈ ನಡುವೆ ದರ್ಶನ್ ಸಿನಿಮಾಗೆ ಯಜಮಾನ ಅಂತ ಹೆಸರಿಟ್ಟ ತಕ್ಷಣ ವಿಷ್ಣುವರ್ಧನ್ ಅವರ ಅಭಿಮಾನಿಗಳು ಇದಕ್ಕೆ ವಿರೋಧ ವ್ಯಕ್ತ ಪಡೆಸಿದ್ರು, ಇಂಡಸ್ಟ್ರಿಯಲ್ಲು ಯಜಮಾನ ಯಾರು ಅನ್ನೋ ಬಗ್ಗೆ ಚರ್ಚೆ ಮೂಡಿತ್ತು.. ಸದ್ಯ ಈ ಬಗ್ಗೆ ಫುಲ್ ಕ್ಲಾರಿಟಿ ಕೊಟ್ಟಿದ್ದಾರೆ ಡಿ ಬಾಸ್…
ಕನ್ನಡ ಚಿತ್ರರಂಗಕ್ಕೆ ಒಬ್ಬರೆ ಯಜಮಾನ ಅದು ವಿಷ್ಣುವರ್ಧನ್ ಅವರು.. ಅವರ ಯಜಮಾನ ಸಿನಿಮಾಗು ನಮ್ಮ ಈ ಸಿನಿಮಾಗು ಯಾವುದೇ ಸಂಬಂಧವಿಲ್ಲ… ಚಿತ್ರದಲ್ಲಿ ಯಜಮಾನ ಯಾರು ಅನ್ನೋದೆ ಕೌತುಕದ ಸಂಗತಿ… ಟ್ರೇಲರ್ ನಲ್ಲಿ ನಿಮಗೆ ಅರಿವಾಗಿರುತ್ತೆ, ಆ ಯಜಮಾನನಿಗು ಈ ಯಜಮಾನನಿಗು ಇರುವ ಭಿನ್ನತೆ. ಎಂದಿದ್ದಾರೆ ದರ್ಶನ್…
ದರ್ಶನ್ ಅವರ ಸಂಪೂರ್ಣ ವಿಡಿಯೋ ಇಲ್ಲಿದೆ ನೋಡಿ..