ಆಸೀಸ್ ಸರಣಿ ಗೆದ್ದು ಹುತಾತ್ಮ ಯೋಧರಿಗೆ ಅರ್ಪಿಸುತ್ತೇವೆ : ಮೊಹಮ್ಮದ್ ಶಮಿ…
ಇದೇ 24 ರಿಂದ ಆತಿಥೇಯ ಭಾರತ ಹಾಗು ಆಸ್ಟ್ರೇಲಿಯಾ ನಡುವೆ ಟಿ-20 ಕದನ ಶುರುವಾಗಲಿದೆ.. ಎರಡು ಟಿ ಟ್ವೆಂಟಿ ಸ್ಟೆಷಲಿಸ್ಟ್ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕಿಳಿಯಲ್ಲಿದ್ದು, ಭಾರತ ತಂಡ ಗೆಲ್ಲುವ ಫೇವರೆಟ್ ಎನ್ನಿಸಿಕೊಂಡಿದೆ.. ಇನ್ನು ಪಂದ್ಯಾವಳಿಗಳಿಗೆ ಉಭಯ ತಂಡಗಳು ಕಠಿಣ ತಾಲೀಮು ನಡೆಸಿದೆ…
ಇದೇ ಸರಣಿಯಲ್ಲಿ ಬಗ್ಗೆ ಮಾತನಾಡಿರುವ ಮೊಹಮ್ಮದ್ ಶಮಿ ಈ ಸರಣಿಯಲ್ಲಿ ಹೆಚ್ಚಿನ ಶ್ರಮವಹಿಸಲ್ಲಿದ್ದು ಗೆಲ್ಲುವ ನಿರೀಕ್ಷೆ ಇದೆ ಎಂದಿದ್ದಾರೆ.. ಜೊತೆಗೆ ಆಸೀಸ್ ವಿರುದ್ಧ ಗೆಲುವ ಸಾಧಿಸಿ ಈ ಜಯವನ್ನ ಉಗ್ರನ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಅರ್ಪಿಸಲಾಗುವುದು ಎಂದಿದ್ದಾರೆ…
ದೇಶದ ಗಡಿಯಲ್ಲಿ ನಮ್ಮ ನೆಮ್ಮದಿಯ ನಿದ್ರೆಗೆ 24*7 ಕಾರ್ಯ ನಿರ್ವಹಿಸುತ್ತಾರೆ.. ಅವರನ್ನ ಕಳೆದುಕೊಂಡು ಅವರ ಕುಟುಂಬ ಸಂಕಷ್ಟದಲ್ಲಿದ್ದು, ನಮ್ಮ ಕೈಲಾದ ಸಹಾಯವನ್ನ ಮಾಡಬೇಕು ಎಂದಿದ್ದಾರೆ.. ಜೊತೆಗೆ ತಾವು ಸಹ ನೆರವಿನ ಹಸ್ತವನ್ನ ಜಾಜಿದ್ದಾರೆ..ಫೆ.14 ರಂದು ನಡೆದ ದಾಳಿಯಲ್ಲಿ 40 ಕ್ಕು ಹೆಚ್ಚು ಯೋಧರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ರು