ಪಾಕಿಸ್ತಾನ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ ಭಾರತ.. ಪಾಕ್ ಗೆ ಹರಿಸುತ್ತಿದ್ದ ನೀರು ಸ್ಟಾಪ್..!!
ತನ್ನ ತಪ್ಪಿಗೆ ಪಾಠ ಕಲಿಯಲು ಪಾಕ್ ಗೆ ಎಷ್ಟೇ ಅವಕಾಶವನ್ನ ಭಾರತ ನೀಡಿದ್ರು, ಅದರ ಆಟ ಹಾಗು ಉಪಟಳ ಮಾತ್ರ ಕಡಿಮೆ ಆಗಿಲ್ಲ… ಕಳೆದ ವಾರ ನಡೆದ ಪುಲ್ವಾಮ ದಾಳಿ ಬಳಿಕ ಭಾರತ ಪಾಕ್ ಗೆ ತಕ್ಕ ಉತ್ತರವನ್ನ ನೀಡಲು ಮುಂದಾಗಿದ್ದು, ಅತೀ ಕಠಿಣ ಕ್ರಮಗಳನ್ನ ಕೈಗೊಳ್ಳುತ್ತಿದೆ.. ಹೀಗಾಗೆ ಪುಲ್ವಾಮ್ ದಾಳಿ ಮಾಸ್ಟರ್ ಮೈಂಡ್ ನ ಹೊಡೆದು ಹಾಕಿ, ಈಗ ಸೀದಾ ಪಾಕಿಸ್ತಾನ ದೇಶಕ್ಕೆ ಸ್ಪಷ್ಟ ಸಂದೇಶವನ್ನ ರವಾನೆ ಮಾಡಿದೆ…
ಅದೇನಂದ್ರೆ ಇಂಡಸ್ ನೀರು ಒಪ್ಪಂದದ ಅಡಿಯಲ್ಲಿ ಭಾರತವೂ ಪಶ್ಚಿಮ ಭಾರತದ ನದಿಗಳಾದ ಇಂಡಸ್, ಝೀಲಂ ಮತ್ತೆ ಚೆನಾಬ್ ನದಿ ನೀರನ್ನ ಪಾಕಿಸ್ತಾನಕ್ಕೆ ಹರಿಸುತ್ತಿತ್ತು.. ಈಗ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೃಢ ನಿರ್ಧಾರ ಕೈಗೊಳ್ಳಲಾಗಿದ್ದು, ಈ ನೀರನ್ನು ನಿಲ್ಲಿಸಲಾಗುತ್ತಿದೆ ಅಂತ, ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ…
ಸದ್ಯ ಹೀಗೆ ನಿಲ್ಲಿಸಲಾಗುತ್ತಿರುವ ನೀರನ್ನ ಜಮ್ಮು ಕಾಶ್ಮೀರ ಹಾಗು ಪಂಜಾಬ್ ಗೆ ಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.. ಬರೀ ಸೇನೆಯ ಮೂಲಕ ಮಾತ್ರವಲ್ಲದೇ ಪಾಕಿಸ್ತಾನದ ಜೊತೆಗಿನ ತನ್ನ ಹಲವು ಒಪ್ಪಂದಗಳನ್ನ ಕೈ ಬಿಡಲು ಮುಂದಾಗಿರುವ ಭಾರತ, ಪಾಕ್ ಗೆ ತಕ್ಕ ಪಾಠ ಕಲಿಸುತ್ತಿದೆ..