ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಚಿತ್ರ ಕೆಜಿಎಫ್. ಕೆಜಿಎಫ್ ಚಾಪ್ಟರ್ 1 ಯಶಸ್ವಿಯಾಗಿದ್ದು, ಚಾಪ್ಟರ್ 2 ಚಿತ್ರೀಕರಣ ಬರುವ ಏಪ್ರಿಲ್ ತಿಂಗಳಿನಿಂದ ಶುರುವಾಗುತ್ತಿದೆ. ಈ ಮಧ್ಯೆ ಚಿತ್ರತಂಡ ಮತ್ತೊಂದು ಹೊಸ ಸುದ್ದಿಯೊಂದನ್ನು ನೀಡಿದ್ದು, ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಈ ಸುದ್ದಿ ಹರಿದಾಡುತ್ತಿದೆ.ಬಾಲಿವುಡ್ ನಟ ಸಂಜಯ್ ದತ್ ಕೆಜಿಎಫ್ ಚಿತ್ರದಲ್ಲಿ ನಟಿಸಲಿದ್ದಾರೆ ಅನ್ನೋದು ಹಳೇ ಸುದ್ದಿ. ಇನ್ನು ಬಾಲಿವುಡ್ ನಿಂದ ಮತ್ತೊರ್ವ ನಟಿ ಬರ್ತಿದ್ದಾರೆ. ಯಾರು ಆ ನಟಿ, ಆಕೆ ಪಾತ್ರ ಯಾವುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಹೌದು, ಆ ನಟಿ ಬೇರೆ ಯಾರು ಅಲ್ಲ ರವೀನಾ ತಂಡನ್. ಈ ಹಿಂದೆ ಉಪೇಂದ್ರ ಚಿತ್ರದಲ್ಲಿ ನಟಿಸಿದರು, ಇದೀಗ ಕೆಜಿಎಫ್ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಾ ಕೃಷ್ಣ ರಾಷ್ಟ್ರಪತಿ ಪಾತ್ರವನ್ನು ನಿಭಾಯಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ರಾಷ್ಟ್ರಪತಿ ರಮಿಕಾ ಪಾತ್ರವನ್ನು ರವೀನಾ ಮಾಡುವುದು ಪಕ್ಕಾ ಎನ್ನಲಾಗಿದೆ. ಒಟ್ಟಿನಲ್ಲಿ ಸಂಜಯ್ ದತ್ ಹಾಗೂ ರವೀನಾ ಸೇರಿದಂತೆ ಹಲವು ಘಟಾನುಘಟಿಗಳು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನೂ ಇನ್ನೂ ಹೆಚ್ಚು ಮಾಡಿದೆ.
ಕೆಜಿಎಫ್ ನಲ್ಲಿ ಇರಲ್ವಂತೆ ಶಿವಗಾಮಿ.. ಈಕೆಯ ಸ್ಥಾನಕ್ಕೆ ಬಂದಿದ್ಯಾರು ಗೊತ್ತಾ..?
Date: