ವನ್ಯ ಜೀವಿ ಉಳಿಸುವಂತೆ ಮನವಿ ಮಾಡಿದ ದಾಸ ದರ್ಶನ್

Date:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಡಿಪುರ ದುರಂತ ನೋಡಿ ತುಂಬಾ ದುಃಖಿತರಾಗಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಬಂಡಿಪುರ ಅಭಯಾರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 8 ಕೀ.ಮೀ. ವ್ಯಾಪ್ತಿಗೆ ಹಬ್ಬಿಕೊಂಡಿದೆ. ಪ್ರಾಜೆಕ್ಟ್ ಟೈಗರ್ ಅಭಿಯಾನಕ್ಕೂ ಈ ಅಭಯಾರಣ್ಯವು ಸಂಬಂಧವನ್ನು ಹೊಂದಿದೆ. ಅಪಾರ ಸಂಖ್ಯೆಯ ವನ್ಯ ಜೀವಿಗಳು ಹಾಗೂ ಸಂಪತ್ತು ನಾಶವಾಗಿವೆ. ಸಹಜವಾಗಿ ಅಲ್ಲಿದ್ದ ಕೆಲವು ಪ್ರಾಣಿ, ಪಕ್ಷಿಗಳು ಕೂಡ ಸುಟ್ಟು ಭಸ್ಮವಾಗಿ ಹೋಗಿವೆ.

ಬಿಸಿಲ ತಾಪಕ್ಕೆ ಹುಲ್ಲು ಒಣಗಿದ್ದರಿಂದ ಒಂದೆಡೆ ಹೊತ್ತಿಕೊಂಡ ಬೆಂಕಿ ವ್ಯಾಪಕವಾಗಿ ಆವರಿಸಿದೆ. ಕುಂದಕೆರೆಯ ಬರೆಕಟ್ಟೆ ಹಾಗೂ ಗುಡ್ಡಕೆರೆ ಬೆಟ್ಟಗಳಲ್ಲಿ ಕಾಣಿಸಿಕೊಂಡ ಬೆಂಕಿ ಹಿಮವದ್ ಗೋಪಾಲ ಸ್ವಾಮಿ ವಲಯದವರೆಗೂ ಹರಡಿದೆ. ಪ್ರಾಣಿ ಪ್ರಿಯರಾದ ದರ್ಶನ್ ಅವರು ಸರ್ಕಾರ ಹಾಗೂ ಸ್ವಯಂ ಸಂಘಗಳ ಜೊತೆಗೆ ಕೈ ಜೋಡಿಸುವ ಮನಸ್ಸು ಮಾಡಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ತಮ್ಮ ಟ್ವಿಟ್ಟರ್ ಪೇಜ್‌ ನಲ್ಲಿ ಪೋಸ್ಟ್ ಮಾಡಿ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌ 

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌  ಕಲಬುರಗಿ: ಕಲಬುರಗಿ ಜಿಲ್ಲೆಯ...

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್. ರಾಜಣ್ಣ

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್....

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ ಗೋಲ್ಡ್ ರೇಟ್

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ...

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...