ಭಾರತ ಪರ ನಿಂತ ವಿಶ್ವದ ಬಲಿಷ್ಠ ರಾಷ್ಟ್ರಗಳು.. ಮಸೂದ್ ನನ್ನ ನಿರ್ಬಂಧಿಸುವಂತೆ ಒತ್ತಾಯ..
ಪಾಕಿಸ್ತಾನದಲ್ಲಿ ಕುಳಿತು ಭಾರತದ ವಿರುದ್ದ ಉಗ್ರಗಾಮಿಗಳನ್ನ ಸಿದ್ದ ಮಾಡಿ ದಾಳಿ ನಡೆಸುತ್ತಿರುವ ಜೈಸದ್ ಇ ಮೊಹಮ್ಮದ್ ಸಂಘಟನೆಯ ಸಂಸ್ಥಾಪಕ ಮಸೂದ್ ಅಜರ್ ಗೆ ನಿರ್ಬಂಧ ಹೇರುವಂತೆ ಅಮೇರಿಕಾ, ಇಂಗ್ಲೆಂಡ್ ಹಾಗು ಫ್ರಾನ್ಸ್ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಒತ್ತಾಯಿಸಿದೆ..
15 ರಾಷ್ಟ್ರಗಳ ಭದ್ರತಾ ಮಂಡಳಿಯ ಮೂರು ಶಾಶ್ವತ ವೀಟೋ ಅಧಿಕಾರವಿರುವ ರಾಷ್ಟ್ರಗಳು ಭದ್ರತಾ ಮಂಡಳಿಯಲ್ಲಿ ಮತ್ತೆ ಹೊಸದಾಗಿ ಒತ್ತಡ ಹೇರಿದೆ.ಉಗ್ರ ಮಸೂದ್ ಆಝರ್ ನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು, ಜಾಗತಿಕ ಪ್ರದೇಶಕ್ಕೆ ನಿಷೇಧ, ಜೆಇಎಂ ಹಾಗೂ ಮಸೂದ್ ಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎನ್ನುವ ಕುರಿತು ಮೂರನೇ ಬಾರಿಗೆ ಪ್ರಯತ್ನ ನಡೆಯುತ್ತಿದೆ.
ಈಗ ವಿಶ್ವಸಂಸ್ಥೆಯ ಉಗ್ರರ ಪಟ್ಟಿಯಲ್ಲಿ ಈತನ ಹೆಸರನ್ನೂ ಸೇರಿಸಬೇಕು ಎಂಬುದು ಅನೇಕ ರಾಷ್ಟ್ರಗಳ ವಾದ. ಭಾರತ ಕೂಡ ಇದಕ್ಕೆ ಬೆಂಬಲ ಸೂಚಿಸಿದೆ.