ಕನ್ನಡ ಇಂಡಸ್ಟ್ರಿಗೆ ಪವರ್ ಬಂದು 43 ವರ್ಷ…
ಕನ್ನಡ ಇಂಡಸ್ಟ್ರಿಯಲ್ಲಿ ದೊಡ್ಡ ಮನೆಗೆ ದೊಡ್ಡ ಹೆಸರಿದೆ.. ಆ ಹೆಸರಿಗೆ ತಕ್ಕಹಾಗೆ ಆ ಮನೆಯ ಮಕ್ಕಳು ನಡೆದುಕೊಂಡು ಬೆಳೆದುಕೊಂಡು ಬಂದಿದ್ದಾರೆ.. ಚಿತ್ರರಂಗದಲ್ಲಿ ತನ್ನ ನಟನೆ ಸಜ್ಜನಿಕೆ ಮೂಲಕ ಹೆಸರು ಮಾಡಿದ ಡಾ.ರಾಜ್ ಕುಮಾರ್ ಅವರ ಮೂರು ಕುಡಿಗಳ ಪೈಕಿ ಪುನೀತ್ ರಾಜ್ ಕುಮಾರ್ ಸಹ ಒಬ್ಬರು.. ಅಭಿಮಾನಿಗಳ ನೆಚ್ಚಿನ ಅಪ್ಪು ಆಗಿ, ಬಾಕ್ಸ್ ಆಫೀಸ್ ನಲ್ಲಿ ಪವರ್ ಸ್ಟಾರ್ ಆಗಿ ಕಂಗೊಳಿಸುತ್ತಿರುವ ಈ ರಾಜಕುಮಾರ ಇಂದು ಇಂಡಸ್ಟ್ರಿಗೆ ಬಂದು 43 ವರ್ಷ ಕಳೆದಿವೆ..
ಹೌದು, ಮುಂದಿನ ತಿಂಗಳು 44 ನೇ ವಸಂತಕ್ಕೆ ಕಾಲಿಡುತ್ತಿರುವ ಅಪ್ಪು, 1975 ರಲ್ಲಿಯೇ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ರು.. ಅದು ಡಾ.ರಾಜ್ ಕುಮಾರ್ ಅಭಿನಯದ ಪ್ರೇಮದ ಕಾಣಿಕೆಯಲ್ಲಿ ಬಣ್ಣಹಚ್ಚಿದ್ರು.. ಆ ಚಿತ್ರ ಇಂದಿಗೆ ತೆರೆ ಕಂಡು 43 ವರ್ಷ ಕಳೆದಿದೆ..
ಡಾ.ರಾಜ್ ಕುಮಾರ್ ಹಾಗೆ ಆರತಿ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ ಈ ಚಿತ್ರವನ್ನ ವಿ.ಸೋಮಶೇಖರ್ ನಿರ್ದೇಶನ ಮಾಡಿದ್ರು.. ಜಯದೇವಿ ಫಿಲ್ಮ್ ಬ್ಯಾನರ್ ಅಡಿ ಪ್ರೇಮದ ಕಾಣಿಕೆ ಸಿದ್ದವಾಗಿತ್ತು.. ಅಂದಿನಿಂದ ಶುರುವಾದ ಪವರ್ ಸ್ಟಾರ್ ಸಿನಿಮಾ ಯಾನ ನಟಸಾರ್ವಭೌಮ ಚಿತ್ರವನ್ನ ತಲುಪಿ ಹಾಗೆ ಮುಂದೆ ಸಾಗಿದೆ…