RCB ಪರ AB ಡಿವಿಲಿಯರ್ಸ್ ಆಡೋದು ಡೌಟ್..! ಅಭಿಮಾನಿಗಳಿಗೆ ಶಾಕ್..!

Date:

ಇನ್ನೇನು ಐಪಿಎಲ್ ೧೨ ರ ಆವೃತ್ತಿಗೆ ಕೆಲವೇ ದಿನಗಳು ಬಾಕಿ ಇದೆ, ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ ಅದರಲ್ಲು ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಂತೂ ಈ ಸಲ ಕಪ್ ನಮ್ದೆ ಅಂತ ಹೇಳ್ತಿದ್ದಾರೆ,

ಆದರೆ ಮೊದಲ ಪಂದ್ಯದಲ್ಲಿ ಚೆನ್ನೈ ತಂಡವನ್ನು ಎದುರಿಸುತ್ತಿರುವ ಆರ್ ಸಿಬಿಗೆ ತಂಡಕ್ಕೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ.
ಹೌದು 360 ಡಿಗ್ರಿ ಶಾಟ್ ಖ್ಯಾತಿಯ ಮಿಸ್ಟರ್ ಪರ್ಫೆಕ್ಟ್ ಎಬಿ ಡಿವಿಲಿಯರ್ಸ್ ಪಾಕಿಸ್ತಾನದ ಸೂಪರ್ ಲೀಗ್‍ನಲ್ಲಿ ಕಳೆದ 2 ದಿನಗಳ ಹಿಂದೆ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದು, ಸದ್ಯ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಇದೇ ಕಾರಣಕ್ಕೆ ಎಬಿಡಿ ಈ ಬಾರಿಯ ಐಪಿಎಲ್ ವೇಳೆಗೆ ಫಿಟ್ ಆಗುವುದು ಡೌಟ್ ಎಂದು ಹೇಳಲಾಗುತ್ತಿದೆ ಆದರಿಂದ ಈ ಸುದ್ದಿ ಅಭಿಮಾನಿಗಳನ್ನು ಕಾಡುತ್ತಿದೆ. ಐಪಿಎಲ್ ಆರಂಭಕ್ಕೆ ಇನ್ನು 3 ವಾರಗಳಷ್ಟೇ ಬಾಕಿ ಇದ್ದು, ಐಪಿಎಲ್ ನಿಂದ ದೂರ ಉಳಿಯುತ್ತಾರೆ ಎನ್ನಲಾಗುತ್ತಿದೆ. ಆದರೆ ಮತ್ತೊಂದು ಮಾಹಿತಿಯ ಪ್ರಕಾರ ಐಪಿಎಲ್ ವೇಳೆ ಚೇತರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.


ಆದರೆ ಸದ್ಯ ವೈದ್ಯರು ಕನಿಷ್ಠ 2 ವಾರಗಳ ವಿಶ್ರಾಂತಿ ಸೂಚಿಸಿದ್ದು, ಆ ಬಳಿಕಷ್ಟೇ ತರಬೇತಿಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ಐಪಿಎಲ್ ನಲ್ಲಿ 4 ಸಾವಿರ ರನ್ ಪೂರ್ಣಗೊಳಿಸಲು ಎಬಿಡಿಗೆ ಇನ್ನು ಕೇವಲ 47 ರನ್ ಗಳ ಅಗತ್ಯವಿದ್ದು, 2008 ರ ಆರಂಭದಿಂದಲೂ ಎಬಿಡಿ ಐಪಿಎಲ್ ಟೂರ್ನಿಯ ಭಾಗವಾಗಿದ್ದಾರೆ. ಇವರೆಗೂ 141 ಪಂದ್ಯಗಳನ್ನು ಆಡಿರುವ ಅವರು 3,953 ರನ್ ಗಳಿಸಿದ್ದಾರೆ. ಕಳೆದ ವರ್ಷದ ಟೂರ್ನಿಯಲ್ಲಿ 12 ಪಂದ್ಯಗಳಿಂದ 480 ರನ್ ಸಿಡಿಸಿದ್ದರು.ಒಟ್ಟಾರೆ ಆದಷ್ಟು ಬೇಗ ಡಿವಿಲಿಯರ್ಸ್ ಚೇತರಿಸಿಕೊಂಡು ತಂಡಕ್ಕೆ ಮರಳಲಿ ಈ ಸಲ ಕಪ್ ನಮ್ದೆ ಎನ್ನುವಂತಾಗಲಿ ಎಂಬುದೆ ಎಲ್ಲರ ಆಶಯ

 

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಬೆಂಗಳೂರು :...

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ!

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ! ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯೆಂದು...

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...