ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಒಬ್ಬರ ಮೇಲೊಬ್ಬರು ಮಾತನಾಡುವುದು ಹೆಚ್ಚಾಗಿದೆ ಇದೇ ರೀತಿ ತೆಲಂಗಾಣದ ಕಾಂಗ್ರೆಸ್ ನಾಯಕಿ ನಟಿ ವಿಜಯಶಾಂತಿ ಅವರು ಮೋದಿಯವರ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ .
ತೆಲಂಗಾಣದ ಶಂಶಾಬಾದ್ ನಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ವಿಜಯಶಾಂತಿ, ಪ್ರಧಾನಿ ಮೋದಿ ಅವರು ಜನರಲ್ಲಿ ಭೀತಿಯನ್ನು ಬಿತ್ತಲು ಯತ್ನಿಸುತ್ತಿದ್ದಾರೆ. ಅವರ ಈ ಕೃತ್ಯದಿಂದ ತುಂಬಾ ಜನರು ಭಯೋತ್ಪಾದನನ್ನು ನೋಡುವ ರೀತಿಯಲ್ಲಿ ಮೋದಿ ಅವರನ್ನು ನೋಡಲು ಆರಂಭಿಸಿದ್ದಾರೆ ಎಂದು ಹೇಳಿದರು.
ರಾಹುಲ್ ಗಾಂಧಿ ಪ್ರಜಾಡಳಿತದ ಪ್ರತೀಕವಾಗಿದ್ದಾರೆ. ಮೋದಿ ಅವರು ಸರ್ವಾಧಿಕಾರಿ ಧೋರಣೆಯ ಆಡಳಿತ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹದಗೆಡಿಸಿದ್ದಾರೆ.ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದರು.
ರಾಜಕೀಯದಲ್ಲಿ ಒಬ್ಬರ ಮೇಲೊಬ್ಬರು ಮಾತನಾಡುವುದು ,ನಿರಂತರವಾಗಿ ನಡೆಯುತ್ತಿದೆ .ಆದರೆ ಮೋದಿ ಅಲೆ ಇರುವುದಂತೂ ನಿಜ ಈ ಲೋಕಸಭೆ ಚುನಾವಣೆಯಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ .