ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸಲ್ಮಾನ ತಂದೆ, ಕ್ರಿಶ್ಚಿಯನ್ ತಾಯಿಗೆ ಹುಟ್ಟಿದ ರಾಹುಲ್ ಗಾಂಧಿ ಬ್ರಾಹ್ಮಣ್ಯ ಆಗಿದ್ದು ಹೇಗೆ? ಇದಕ್ಕೆ ಸಾಕ್ಷ್ಯ ಕೊಡ್ತಾರಾ ಎಂದು ಅನಂತ್ಕುಮಾರ್ ಹೆಗಡೆ ಪ್ರಶ್ನೆ ಮಾಡಿದ್ದಾರೆ..!
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಾರ್ಯಕ್ರಮವೊಂದರಲ್ಲಿ ಅನಂತ್ಕುಮಾರ್ ಹೆಗಡೆ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತದ ಸೇನೆ ಉಗ್ರರನ್ನು ಹೊಡೆದುರುಳಿಸಿದ್ದಕ್ಕೆ ಸಾಕ್ಷಿ ಕೇಳುತ್ತಾರೆ. ಆದರೆ, ಮುಸಲ್ಮಾನನ ಮಗ ಬ್ರಾಹ್ಮಣ ಹೇಗಾದ..? ಗಾಂಧಿ ಹೇಗಾದ? ಎಂದು ಪ್ರಶ್ನಿಸಿದ್ದಾರೆ.
ಸೇನಾ ದಾಳಿಗೆ ಸಾಕ್ಷ್ಯ ಕೇಳೋರು…ಬ್ರಾಹ್ಮಣ ಹೇಗಾದ ಅನ್ನೋದಕ್ಕೆ ಸಾಕ್ಷ್ಯ ಕೊಡಲಿ ಅಂತ ಹೇಳಿದ್ದಾರೆ.
ಮುಸಲ್ಮಾನ ತಂದೆ, ಕಿಶ್ಚಿಯನ್ ತಾಯಿಗೆ ಹುಟ್ಟಿದ ರಾಹುಲ್ ಗಾಂಧಿ ಬ್ರಾಹ್ಮಣ ಹೇಗಾದ? : ಅನಂತ್ಕುಮಾರ್ ಹೆಗಡೆ
Date: