ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ದಿನಗಣನೆ ಪ್ರಾರಂಭವಾಗಿದೆ. ಪ್ರತಿವರ್ಷ ಸಹ ಅಪ್ಪು ಹುಟ್ಟುಹಬ್ಬ ಅದ್ದೂರಿಯಾಗಿ ನೆರವೇರುತ್ತದೆ. ಈ ಬಾರಿ ಸಹ ಪವರ್ ಸ್ಟಾರ್ ಹುಟ್ಟು ಹಬ್ಬದ ಅಬ್ಬರ ಜೋರಾಗಿಯೇ ಇರಲಿದೆ. ಈಗಾಗಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮದೆ ಶೈಲಿಯಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ.
ಅಪ್ಪು ಹುಟ್ಟುಹಬ್ಬ ಅಂದಮೇಲೆ ಉಡುಗೊರೆಗಳ ಸುರಿಮಳೆಯೆ ಬರಲಿದೆ. ಈ ಬಾರಿ ಸಹ ಸಾಕಷ್ಟು ಗಿಫ್ಟ್ ಅಂಡ್ ಸರ್ಪ್ರೈಸಸ್ ಅವರಿಗಾಗಿ ಕಾದಿವೆ. ಇದೇ ತಿಂಗಳು ಅಂದರೆ ಮಾರ್ಚ್ 17ರಂದು ಪವರ್ ಸ್ಟಾರ್ ಹುಟ್ಟು ಹಬ್ಬ. ಈ ವಿಶೇಷ ದಿನದ ಸಂದರ್ಭದಲ್ಲಿ ಅಭಿಮಾನಿಗಳಿಗೂ ಪುನೀತ್ ಕಡೆಯಿಂದ ಮನರಂಜನೆಯ ಮಹಾಪೂರವೆ ಸಿಗಲಿದೆ. ಹೌದು, ಪುನೀತ್ ಹುಟ್ಟು ಹಬ್ಬದ ಪ್ರಯುಕ್ತ ಸಾಕಷ್ಟು ಉಡುಗೊರೆಗಳು ಕಾದಿವೆ. ಸದ್ಯ, ಅಪ್ಪು ‘ಯುವರತ್ನ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘ಯುವರತ್ನ’ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿದ್ದಾರೆ. ‘ರಾಜಕುಮಾರ’ ಸಕ್ಸಸ್ ನ ನಂತರ ಅಪ್ಪು ಮತ್ತು ಸಂತೋಷ್ ಕಾಂಬಿನೇಶನ್ ನ ಎರಡನೇ ಸಿನಿಮಾ ಇದಾಗಿದೆ. ಹಾಗಾಗಿ, ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಗಿದೆ. ಅಲ್ಲದೆ, ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರದ ಕಡೆಯಿಂದ ಸಹ ಅಪ್ಪುಗೆ ದೊಡ್ಡ ಸರ್ಪ್ರೈಸ್ ಸಿಗಲಿದೆ ಪವರ್ ಸ್ಟಾರ್ ಸದ್ಯ ‘ಯುವರತ್ನ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆನೇ ‘ಜೇಮ್ಸ್’ ಚಿತ್ರಕ್ಕೂ ಸಹ ಗ್ರೀನ್ ಸಿಗ್ನಲ್ ನೀಡಿದ್ದಾರೆ. ನಿರ್ದೇಶಕ ಭರ್ಜರಿ ಚೇತನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಜೇಮ್ಸ್’ ಚಿತ್ರದ ಮೊದಲ ಮೋಷನ್ ಪೋಸ್ಟರ್ ಪುನೀತ್ ಹುಟ್ಟು ಹಬ್ಬದ ದಿನ ರಿಲೀಸ್ ಆಗುತ್ತಿದೆ. ಚೇತನ್ ಮೊದಲ ಬಾರಿಗೆ ಪವರ್ ಸ್ಟಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಮ್ಮ ಮೊದಲ ಚಿತ್ರದ ಮೊದಲ ಮೋಷನ್ ಪೋಸ್ಟರ್ ಅನ್ನು ಪುನೀತ್ ಹುಟ್ಟುಹಬ್ಬಕ್ಕೆ ರಿಲೀಸ್ ಮಾಡುತ್ತಿದ್ದಾರೆ ಚೇತನ್. ಅಂದ್ಹಾಗೆ ಚೇತನ್ ಸದ್ಯ ‘ಭರಾಟೆ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ‘ಭರಾಟೆ’ ಮುಗಿದ ಬಳಿಕ ‘ಜೇಮ್ಸ್’ ಕೈಗೆತ್ತಿಕೊಳ್ಳಲಿದ್ದಾರೆ.
ಈಗಾಗಲೇ ಭಾರಿ ಕುತೂಹಲ ಮೂಡಿಸಿರುವ ‘ಯುವರತ್ನ’ ಚಿತ್ರದ ಕಡೆಯಿಂದ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಸದ್ಯ ಅಪ್ಪು ‘ಯುವರತ್ನ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿದ್ದಾರೆ. ‘ರಾಜಕುಮಾರ’ ಚಿತ್ರದ ಸಕ್ಸಸ್ ನ ನಂತರ ಈ ಜೋಡಿಯ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಹಾಗಾಗಿ, ‘ಯುವರತ್ನ’ ಚಿತ್ರದ ಮೊದಲ ಲುಕ್ ಕುತೂಹಲ ಮೂಡಿಸಿದೆ. ಪುನೀತ್ ಉತ್ಸವದಲ್ಲಿ ನಿರ್ದೇಶಕ ಪವನ್ ಒಡೆಯರ್ ಕೂಡ ಭಾಗಿಯಾಗುತ್ತಿದ್ದಾರೆ.
ದೊಡ್ಮನೆ ಹುಡುಗನಿಗೆ ಹಾಡಿನ ಉಡುಗೊರೆ ನೀಡುವ ಮೂಲಕ ವಿಶೇಷವಾಗಿ ಶುಭ ಕೋರುತ್ತಿದ್ದಾರೆ. ಈಗಾಗಲೇ ‘ನಟ ಸಾರ್ವಭೌಮ’ ಚಿತ್ರದ ಟೈಟಲ್ ಟ್ರ್ಯಾಕ್ ಅಭಿಮಾನಿಗಳ ಮನಗೆದ್ದಿದೆ. ಇದೇ ಹಾಡಿಗೆ ಹೊಸ ಲಿರಿಕ್ಸ್ ಸೇರಿಸಿ ವಿಶೇಷವಾದ ಹಾಡೊಂದನ್ನು ತಯಾರಿಸುತ್ತಿದ್ದಾರೆ.