ಅಂಬರೀಶ್ ಅವರಿಗೂ ಡಾ.ರಾಜ್‍ಕುಮಾರ್ ಕುಟುಂಬಕ್ಕೂ ವಿಶೇಷವಾದ ಅವಿನಾಭಾವ ಸಂಬಂಧ ಇದೆ. ಮೊದಲಿನಿಂದಲೂ ಸಹ ಅಂಬರೀಶ್ ಅವರು ಅಣ್ಣಾವ್ರ ಕುಟುಂಬದ ಒಂದು ಭಾಗವಾಗೆ ಇದ್ದರು. ಅಷ್ಟೆ ಅಲ್ಲದೇ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದೇ ಶ್ರೀಮತಿ ಪಾರ್ವತಮ್ಮ ರಾಜ್‍ಕುಮಾರ್ ಅವರು. ಅಂದಿನಿಂದ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿಯಾದರು ಸುಮಲತಾ.
ಇದೀಗ ಇದೇ ಮೊದಲ ಬಾರಿಗೆ ಡಾ.ಶಿವರಾಜಕುಮಾರ್ ಅವರು ಸುಮಲತಾ ಅಂಬರೀಶ್ ಅವರ ಸ್ಪರ್ಧೆ ಬಗ್ಗೆ ಹೇಳಿಕೆ ನೀಡಿದ್ದಾರೆ ಮಂಡ್ಯದಲ್ಲಿ ಸುಮಲತಾ ಅವರ ಸ್ಪರ್ಧೆ ಅವರ ವೈಯಕ್ತಿಕ ನಿರ್ಧಾರವಾಗಿದೆ. ಅವರ ಕುರಿತು ಪ್ರಚಾರಕ್ಕೆ ಹೋಗುವ ಬಗ್ಗೆ ನಾನಿನ್ನೂ ನಿರ್ಧಾರ ಮಾಡಿಲ್ಲ ಎಂದು ನಟ ಶಿವ ರಾಜ್‍ಕುಮಾರ್ ತಿಳಿಸಿದರು ಸುಮಲತಾ ಅವರು ನಮ್ಮ ಜೊತೆ ಈ ಬಗ್ಗೆ ಮಾತನಾಡಿದರೆ ಖಂಡಿತವಾಗಿ ಚರ್ಚಿಸುತ್ತೇನೆ ಎಂದು ಶಿವಣ್ಣ ಹೇಳಿದ್ದಾರೆ.
ಅಂಬರೀಶ್ ನನ್ನ ತಂದೆಯ ಸಮಾನ. ಅವರ ಬಗ್ಗೆ ನನಗೆ ಗೌರವ ಇದ್ದೇ ಇರುತ್ತದೆ. ಸುಮಲತಾ ಪರ ಪ್ರಚಾರಕ್ಕೆ ಹೋಗುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ.ಇದೇ ವೇಳೆ ಸುಮಲತಾ ಕುರಿತು ಸಚಿವ ರೇವಣ್ಣ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿ, ರೇವಣ್ಣ ಅವರು ಮಾತನಾಡಿದ್ದು ತಪ್ಪು. ಯಾವುದೇ ಹೆಣ್ಣಿಗಾದರೂ ಅಂತಹ ಪದಬಳಕೆ ಮಾಡಬಾರದು ಎಂದು ಹೇಳಿದರು.
ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ವಾತಂತ್ರ್ಯ ಇರುತ್ತದೆ. ಒಂದು ಹೆಣ್ಣು ಚುನಾವಣೆಯಲ್ಲಿ ಸ್ಪರ್ಧಿಸುವಾಗ ಎಲ್ಲರೂ ಬೆಂಬಲ ಕೊಡಬೇಕು ವಿನಹ ಹಗುರವಾಗಿ ಮಾತನಾಡಬಾರದು ಎಂದರು.