ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ವಿಚಾರದಲ್ಲಿ ಯುವಕರಿಬ್ಬರು ಕಿತ್ತಾಡಿಕೊಂಡು ಪೋಲೀಸ್ ಠಾಣೆ ಮೆಟ್ಟಿಲೇರಿದ್ದರೆ, ಇತ್ತ ರಾಗಿಣಿ ಏಕಾಏಕಿ ದುಬೈಗೆ ಹಾರಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ರಾಗಿಣಿ ತನ್ನ ಸ್ನೇಹಿತರೊಂದಿಗೆ ಡಿನ್ನರ್‌ಗೆ ತೆರಳಿದ್ದಾಗ, ರವಿಶಂಕರ್ ಹಾಗೂ ಶಿವಪ್ರಕಾಶ್ ಎನ್ನುವವರ ನಡುವೆ ನಡೆದಿದ್ದ ಕಿತ್ತಾಟಕ್ಕೆ ಸಂಬಂಧಿಸಿದಂತೆ ಆಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಗಿಣಿ ಜತೆ ಡಿನ್ನರ್ ಗೆ ತೆರಳಿದ್ದ ರವಿಶಂಕರ್ ಎನ್ನುವ ವ್ಯಕ್ತಿ ರಾಗಿಣಿಯ ಹೊಸ ಬಾಯ್‌ಫ್ರೆಂಡ್ ಎನ್ನುವ ಮಾತುಗಳು ಹರಿದಾಡುತ್ತಿದ್ದು, ಈ ಎಲ್ಲ ವಿವಾದದಿಂದ ದೂರ ಉಳಿಯಲು ತಾಯಿಯೊಂದಿಗೆ ರಾಗಿಣಿ ದುಬೈಗೆ ತೆರಳಿದ್ದು, ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ತಿಳಿದುಬಂದಿದೆ.
ಈ ಗಲಾಟೆಗೆ ರಾಗಿಣಿಯೊಂದಿಗೆ ರವಿಶಂಕರ್ ಸಲುಗೆಯಿಂದ ನಡೆದುಕೊಳ್ಳುತ್ತಿದ್ದುದೇ ಮೂಲ ಕಾರಣ ಎನ್ನುವ ಅನುಮಾನ ವ್ಯಕ್ತವಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿ ಶಿವಪ್ರಕಾಶ್ ಇದನ್ನು ನೋಡಿ ಕುಪಿತಗೊಂಡು ಗಲಾಟೆ ಶುರು ಮಾಡಿದ್ದಾರೆ.