ಐಪಿಎಲ್ 12ನೇ ಆವೃತ್ತಿ 2ನೇ ಪಂದ್ಯಇಂದು ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡ, ಸನ್ ರೈಸರ್ಸ್ ಎದುರಿಸಲಿದೆ. ಟಾಸ್ ಗೆದ್ದ KKR ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ಹೈದ್ರಾಬಾದ್ ಇಂದು ಕೊಲ್ಕತ್ತಾ ತಂಡದ ಎದುರು ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿ ಇದೆ. ರೈಸರ್ಸ್ ತಂಡದ ಸ್ಟಾರ್ ಆಟಗಾರರಿಗೆ ಇಂಜುರಿ ಸಮಸ್ಯೆ ಕಾಡುತ್ತಿದೆ. ಕೇನ್ ವಿಲಿಯಮ್ಸನ್ ಬದಲು ಭುವನೇಶ್ವರ್ ಕುಮಾರ್ SRH ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಇತ್ತ ದಿನೇಶ್ ಕಾರ್ತಿಕ್ ನಾಯಕತ್ವದಲ್ಲಿ 2ನೇ ಬಾರಿಗೆ ಕಣಕ್ಕಿಳಿಯುತ್ತಿರುವ ಕೆಕೆಆರ್ ಶುಭಾರಂಭದ ವಿಶ್ವಾಸದಲ್ಲಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿರುವ KKR ತಂಡಕ್ಕೆ ತವರಿ ಪ್ರೇಕ್ಷಕರ ಬೆಂಬಲ ಸಿಗಲಿದೆ.