ಪ್ರತಿಯೊಬ್ಬರಿಗೂ ತಮ್ಮ ಕನಸಿನ ಉದ್ಯೋಗ ಪಡೆಯುವ ಆಸೆ ಇರುತ್ತೆ. ಆದರೆ, ಆಸೆ ಪಟ್ಟಂತೆ ಕೆಲಸ ಸಿಗಬೇಕಲ್ಲಾ? ನೀವು ನಿಮ್ಮ ಕನಸಿನ ಉದ್ಯೋಗವನ್ನು ಗಳಿಸಿಕೊಳ್ಳಬೇಕಾದರೆ ಹೀಗೆ ಮಾಡಲೇ ಬೇಕು.
ಬೇಕಾ ಬಿಟ್ಟಿ ಸಂದರ್ಶನಕ್ಕೆ ಹೋಗಬೇಡಿ
ಸಂದರ್ಶನಕ್ಕೆ ಹೋಗುವಾಗ ಬೇಕಾಬಿಟ್ಟಿ ಹೋಗಬೇಡಿ. ಎಷ್ಟೇ ಬುದ್ಧಿವಂತರಾಗಿದ್ದರೂ ತಯಾರಿ ನಡೆಸಿಯೇ ಹೋಗಬೇಕು. ಆಗ ಮಾತ್ರ ಕನಸಿನ ಉದ್ಯೋಗ ಪಡೆಯಲು ಸಾಧ್ಯ.
ಆಂಗಿಕ ಭಾಷೆ
ಆಂಗಿಕ ಭಾಷಣೆ ಎಂದರೆ, ಶಾರೀರಿಕ ಹಾವ-ಭಾವದ ಮೂಲಕ ವ್ಯಕ್ತಿಯ ವಿಚಾರಧಾರೆಗಳನ್ನು ಬೇರೆಯವರಿಗೆ ತಲುಪಿಸುವುದೇ ಆಂಗಿಕ ಭಾಷೆ. ಆದ್ದರಿಂದ ನೀವು ಮಾತನಾಡುವಾಗ ಸಂದರ್ಶಕರನ್ನು ಸೆಳೆಯುವಂತೆ ನಿಮ್ಮ ಆಂಗಿಕ ಭಾಷೆ ಇರಬೇಕು. ಉಡುಗೆ ತೊಡುಗೆ ಕೂಡ ನೀಟಾಗಿರಬೇಕು. ಆಗ ಮಾತ್ರ ನಿಮ್ಮ ಕನಸಿನ ಉದ್ಯೋಗ ನಿಮ್ಮದಾಗುತ್ತೆ.
ಉತ್ತರ ಹೀಗಿರಲಿ : ವಿಷಯ ಗೊತ್ತಿದೆ ಅಂತ ಕಥೆ-ಪುರಾಣ ಬೇಡ.. ಉತ್ತರವನ್ನು ನೇರವಾಗಿ ಅರ್ಥವಾಗುವ ರೀತಿಯಲ್ಲಿ ಸ್ಪಷ್ಟವಾಗಿ ಹೇಳಿ (ಬರವಣೆಗೆಯಲ್ಲೂ ಕೂಡ)