ಎಪಿಎಎಂಟಿ ಪರೀಕ್ಷಾ ಅರ್ಜಿಯನ್ನು ಆನ್ ಲೈನ್ ನಲ್ಲಿ ತುಂಬುವ ವೇಳೆ ಹೆಣ್ಣು/ಗಂಡು ಕಾಲಂನಲ್ಲಿ ತಪ್ಪಾಗಿ ನಮೂದು ಮಾಡಿದ್ದರಿಂದ ಪರೀಕ್ಷೆ ಬರೆಯುವುದರಿಂದ ವಂಚಿತ ಆಗುವ ಆತಂಕದಲ್ಲಿದ್ದ ಚಿತ್ರದುರ್ಗದ ವಿದ್ಯಾರ್ಥಿನಿಗೆ ಪ್ರಧಾನಿ ನರೇಂದ್ರ ಮೋದಿ ಅಭಯನ್ನಿತ್ತಿದ್ದಾರೆ..!
ಆಕೆ, ಎಸ್ಆರ್ಎಸ್ ಕಾಲೇಜಿನ ವಿಜ್ಞಾನ ವಿದ್ಯಾರ್ಥಿನಿ ಬಿ.ಎಂ ದಿವ್ಯಶ್ರೀ. ಈ ಬಾರಿಯ ಅಂದರೆ 2016ನೇ ಸಾಲಿನ ಎಪಿಎಎಂಟಿ ಪರೀಕ್ಷೆ ತೆಗೆದುಕೊಳ್ಳೋಕೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದಳು. ಅರ್ಜಿ ಸಲ್ಲಿಸುವಾಗ ಹೆಣ್ಣೆಂದು ನಮೂದಿಸುವ ಬದಲು ಆಕಸ್ಮಿಕವಾಗಿ ಗಂಡೆಂದು ಸೂಚಿಸಿದ್ದಳು. ಅರ್ಜಿಯನ್ನು ಸಲ್ಲಿಸಿದ ಬಳಿಕವಷ್ಟೇ ಅವಳಿಗೆ ತಪ್ಪಿನ ಅರಿವಾಗಿದೆ. ಈ ತಪ್ಪಿನಿಂದಾಗಿಯೇ ತನಗೆ ಪರೀಕ್ಷೆ ಬರೆಯಲು ಅವಕಾಶ ಸಿಗಲ್ವೇನೋ ಅನ್ನೊ ಆತಂಕ ಅವಳಿಗಿತ್ತು..! ಕಾಲೇಜಿನ ಪ್ರಾಂಶುಪಾಲರು ತನ್ನ ವಿದ್ಯಾರ್ಥಿನಿಗೆ ಪ್ರಧಾನಿ ಮೋದಿಯವರಿಗೆ ಈ ಬಗ್ಗೆ ಇ-ಮೇಲ್ ಮಾಡುವಂತೆ ಸೂಚಿಸ್ತಾರೆ..! ಅದರಂತೆ ದಿವ್ಯಶ್ರೀ ಪ್ರಧಾನಿಯವರಲ್ಲಿ ಮನವಿ ಮಾಡಿಕೊಳ್ಳುತ್ತಾಳೆ. ತಕ್ಷಣ ಆಕೆಯ ಮನವಿಗೆ ಸ್ಪಂದಿಸಿದ ಮೋದಿ ಆಗಿರುವ ತಪ್ಪನ್ನು ಸರಿಪಡಿಸುವಂತೆ ಸಂಬಂಧಪಟ್ಟವರಿಗೆ ಆದೇಶಿಸಿ, ಪರೀಕ್ಷೆ ಬರೆಯಲು ಯಾವುದೇ ತೊಂದರೆ ಇಲ್ಲವೆಂದ ಕೇವಲ 12ಗಂಟೆಯೊಳಗೆ ವಿದ್ಯಾರ್ಥಿನಿಗೆ ಇ-ಮೇಲ್ ಮಾಡಿದ್ದಾರೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಸೇನೆಗೆ ಸೇರಲು ಕನ್ನಡ ಯುವಕರ ದಂಡು ಇವರಿಗೆ ಸಿಯಾಚಿನ್ ಹುತಾತ್ಮ ಯೋಧರೇ ಪ್ರೇರಣೆ..!
ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!
ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?
ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music
ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!