ಒಂದೇ ಲೋಕಸಭಾ ಕ್ಷೇತ್ರಕ್ಕೆ ಗಂಡ-ಹೆಂಡತಿ ಇಬ್ಬರೂ ನಾಮಪತ್ರ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸುವ ಜೊತೆಗೆ ಜನರ ಗಮನವನ್ನೂ ಸೆಳೆದಿದ್ದಾರೆ. ಮಹಾರಾಷ್ಟ್ರದ ಅಹಮದ್ ನಗರ ಲೋಕಸಭಾ ಕ್ಷೇತ್ರದಿಂದ ಹೀಗಿಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸುಜವ್ ವಿಖೆ ಪಾಟೀಲ್ ಮತ್ತು ಅವರ ಪತ್ನಿ ಧನಶ್ರೀ ವಿಖೆ ಒಂದೇ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿರುವ ದಂಪತಿ. ಈ ನಡೆಯಲ್ಲಿ ಸುಜವ್ ಅವರ ತಂತ್ರವೂ ಇದೆ ಎನ್ನಲಾಗಿದೆ. ಏಕೆಂದರೆ ಸುಜವ್ ಇತ್ತೀಚೆಗೆ ಕಾಂಗ್ರೆಸ್‍ನಿಂದ ಬಿಜೆಪಿಗೆ ಪಕ್ಷಾಂತರವಾಗಿದ್ದು, ಒಂದು ವೇಳೆ ನಾಮಪತ್ರ ತಿರಸ್ಕೃತವಾದರೆ ಎಂಬ ಕಾರಣಕ್ಕೆ ಪತ್ನಿಯಿಂದಲೂ ನಾಮಪತ್ರ ಹಾಕಿಸಿದ್ದಾರೆ.
ಪತಿ ಬಿಜೆಪಿಗೆ ಸೇರಿದ್ದನ್ನು ಬೆಂಬಲಿಸುತ್ತೇನೆ. ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ಮನೆಯಲ್ಲಿ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ.ಹಾಗಾಗಿ ನಮ್ಮ ಮಧ್ಯೆ ಭಿನ್ನಾಭಿಪ್ರಾಯ ಬರುವುದಿಲ್ಲ ಎಂದು ಧನಶ್ರೀ ಹೇಳಿದ್ದಾರೆ