ಅದೃಷ್ಟ ಎಂಬುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೂರದ ಬೆಟ್ಟವಿದ್ದಂತೆ. ಇದಕ್ಕೆ ಸಾಕ್ಷಿ ತಂಡದಲ್ಲಿ ಘಟಾನುಘಟಿ ಆಟಗಾರರು ಇದ್ದ ಹೊರತಾಗಿಯೂ ಈವರೆಗೆ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಹೀಗಿರುವಾಗ ಕೆಲ ಆಟಗಾರರು ಆರ್ಸಿಬಿ ತಂಡ ಸೇರಿದ್ದಕ್ಕೆ ಬೇಸರಗೊಂಡಿದ್ದು ಇದೆಯಂತೆ. ಈ ಮಧ್ಯೆ ಆರ್ಸಿಬಿ ಆಟಗಾರನೋರ್ವ ನನ್ನ ಕ್ರಿಕೆಟ್ ಜೀವನ ಅಂತ್ಯವಾಗುವವರೆಗೆ ಆರ್ಸಿಬಿ ಬಿಟ್ಟು ಬೇರೆ ತಂಡ ಸೇರಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಈ ರೀತಿಯ ಹೇಳಿಕೆ ನೀಡಿದ್ದು ಟೀಂ ಇಂಡಿಯಾದ ಯುವ ಪ್ರತಿಭಾನ್ವಿತ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್. ‘ಆರ್ಸಿಬಿ ನನಗೆ ಕುಟುಂಬವಿದ್ದಂತೆ. ನಾನು 2014 ರಲ್ಲಿ ಐಪಿಎಲ್ಗೆ ಕಾಲಿಟ್ಟಾಗ ಆರ್ಸಿಬಿ ಪ್ರಾಂಚೈಸಿಯಲ್ಲಿ ಆಡುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ನನಗೆ ಬೆಂಗಳೂರಿಗೆ ಬರುವುದು ಎಂದರೆ ತುಂಬಾನೆ ಖುಷಿ.ಮತ್ತು ಐಪಿಎಲ್ನಲ್ಲಿ ನಾನು ಆಡುವುದಾದರೆ ಅದು ಆರ್ಸಿಬಿಯಲ್ಲಿ ಮಾತ್ರ ‘ಎಂದು ಚಹಾಲ್ ಹೇಳಿದ್ದಾರೆ