2019 ರ ಐಪಿಎಲ್ ಆವೃತ್ತಿ ಆರಂಭವಾದಾಗಿನಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದರ ಹಿಂದೆ ಒಂದರಂತೆ ಸಾಲು ಸಾಲು ಸೋಲುಗಳನ್ನು ಕಂಡಿತ್ತು ಇದು ಆರ್ ಸಿ ಬಿ ಅಭಿಮಾನಿಗಳ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು.
ಆದರೆದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇಯ್ನ್ ಆರ್ ಸಿ ಬಿ ತಂಡವನ್ನು ಕೂಡಿಕೊಂಡ ಮೇಲೆ ಒಂದರ ಹಿಂದೆ ಒಂದರಂತೆ ಹ್ಯಾಟ್ರಿಕ್ ಗೆಲುವನ್ನು ಆರ್ಸಿಬಿ ತಂಡ ಕಂಡಿತ್ತು ಆದರೆ ಭುಜದ ನೋವಿನ ಸಮಸ್ಯೆಯಿಂದ ಡೇಲ್ ಸ್ಟೇನ್ ಇದೀಗ ಟೂರ್ನಿ ಇಂದ ಹೊರ ನಡೆದಿದ್ದಾರೆ.
ಇದು ಆರ್ಸಿಬಿ ತಂಡಕ್ಕೆ ತೀವ್ರ ಹಿನ್ನಡೆಯನ್ನು ಅನುಭವಿಸುವಂತೆ ಮಾಡಿತು ಡೇಲ್ ಸ್ಟೇನ್ ಜಾಗವನ್ನು ಯಾರೂ ಸಮರ್ಥವಾಗಿ ತುಂಬುತ್ತಾರೆ ಎನ್ನುವ ಗೊಂದಲ ಎಲ್ಲರನ್ನೂ ಕಾಡಿತ್ತು.
ಮುಂಬರುವ ಆರ್ ಸಿ ಬಿ ಪಂದ್ಯಗಳಲ್ಲಿ ಡೇಲ್ ಸ್ಟೇನ್ ಜಾಗವನ್ನು ಸಮರ್ಥವಾಗಿ ತುಂಬಲು ಟೀಮ್ ಮ್ಯಾನೇಜ್ಮೆಂಟ್ ಯೋಚಿಸುತ್ತಿದ್ದೆ ಅದಕ್ಕಾಗಿ ಆಸ್ಟ್ರೇಲಿಯಾದ ಆಟಗಾರರಾದ
ಆಲ್ ರೌಂಡರ್ ಡೇನಿಯಲ್ ಕ್ರಿಶ್ಚಿಯನ್
ವೇಗಿ ಜೇಮ್ಸ್ ಪ್ಯಾಟಿನ್ಸನ್
ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮಾರ್ನೆ ಮಾರ್ಕೆಲ್
ಈ ಮೂವರಲ್ಲಿ ಒಬ್ಬರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್ ಸಿ ಬಿ ಚಿಂತೆಯನ್ನು ನಡೆಸಿದೆ ಎನ್ನಲಾಗುತ್ತಿದೆ, ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದೆ ಉಳಿದಿದ್ದ ಈ ಆಟಗಾರರು ಈ ಹಿಂದಿನ ಐಪಿಎಲ್ ಸೀಸನ್ ಗಳಲ್ಲಿ ವಿವಿಧ ತಂಡಗಳ ಪರ ಆಟವಾಡಿ ಗಮನವನ್ನು ಸೆಳೆದಿದ್ದಾರೆ
ಹೀಗಾಗಿ ಡೇಲ್ ಸ್ಟೇಯ್ನ್ ಜಾಗವನ್ನು ಈ ಮೂವರಲ್ಲಿ ಯಾರೂ ಸಮರ್ಥವಾಗಿ ತುಂಬುತ್ತಾರೆ ಎಂಬುದನ್ನು ಮುಂದಿನ ಪಂದ್ಯಗಳಲ್ಲಿ ಕಾದು ನೋಡಬೇಕಾಗಿದೆ.